ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟು ಮಳೆಗಾಗಿ ವಿಚಿತ್ರ ಆಚರಣೆ….
ಮಳೆಗಾಗಿ ಜನರು ಪೂಜೆ ಹೋಮ ಹವನ ಮಾಡೋದನ್ನ ನೋಡಿದ್ದಿರಾ. ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಬಗ್ಗೆನೂ ಕೇಳಿದ್ದೀರ ಆದ್ರೆ ಹೂತಿರುವ ಶವದ ಬಾಯಿಗೆ ನೀರಿ ಬಿಟ್ಟಿರುವ ಆಚರಣೆ ಎಲ್ಲಾದ್ರೂ ನೋಡಿದ್ದೀರಾ ? ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಇಂಥಹ ವಿಚಿತ್ರ ಆಚರಣೆ ಮಾಡಿದ್ದಾರೆ ಜನತೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಳೆಗಾಗಿ ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರು ಉಣಿಸಿ ಆಚರಣೆ ಮಾಡಿದ್ದಾರೆ.
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ವಿಜಯಪುರದಲ್ಲಿ ಇನ್ನೂ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದ್ದರು. ಈ ಹಿನ್ನೆಲೆ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತೇ ಅನ್ನೋ ನಂಬಿಕೆಯಿಂದ ಗೋರಿಯಲ್ಲಿದ್ದ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ತಂದು ಹಾಕಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
a typical ritual in vijayapur district for rain pour water on the buried corpse and pray for rain