ಹಾಸನ: ಯುವಕನೊಬ್ಬ ಯುವತಿಗೆ ಚಿತ್ರ ಹಿಂಸೆ ನೀಡುವ ವಿಡಿಯೋವೊಂದು ವೈರಲ್ ಆಗಿದೆ.
ಹೀಗಾಗಿ ಕುಶಾಲನಗರ ಶರತ್ ಎಂಬಾತನ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಲೈಂಗಿಕವಾಗಿ ಬಳಸಿಕೊಂಡು ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಶರತ್, ದೈಹಿಕವಾಗಿ ಬಳಸಿಕೊಂಡಿದ್ದಲ್ಲದೇ, ಹಣ ಹಾಗೂ ಒಡವೆ ಪಡೆದು ವಂಚಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಯುವತಿಯೊಂದಿಗೆ ಚೆನ್ನಾಗಿ ಇದ್ದಾಗಲೇ ಮತ್ತೋರ್ವ ಯುವತಿಯೊಂದಿಗೆ ಓಡಾಟ ನಡೆಸಿದ್ದ ಎಂದು ಯುವತಿ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿ ಶರತ್ನನ್ನು ಯುವತಿ ಪ್ರಶ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಶರತ್ ಪ್ರೇಯಸಿಗೆ ಮನಬಂದಂತೆ ಥಳಿಸಿದ್ದಾನೆ. ಹಲ್ಲೆ ನಡೆಸುವಾಗಲೇ ವೀಡಿಯೋ ಕಾಲ್ ಮಾಡಿ ಹೊಸ ಗೆಳತಿಗೂ ತೋರಿಸಿದ್ದಾನೆ. ಈ ವಿಡಿಯೋ ಕಾಲ್ ಸಮೇತ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಸಕಲೇಶಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.