ಪೊಲೀಸರು ದಿವ್ಯಾಂಗ ಮಹಿಳೆಯನ್ನು ಠಾಣೆಯ ಎದುರು ಎಳೆದೊಯ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ, ಪೊಲೀಸರು, ಆಕೆಯ ಮಾನಸಿಕ ಸ್ಥಿತಿ ಸರಿ ಇರಲಿಲ್ಲ, ಆಕೆ ಹಾಗೂ ಅವಳ ಪತಿಗೆ ಜಗಳ ನಡೆದಿದೆ. ಪತಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಆದರೆ ಅಲ್ಲಿ ಠಾಣೆಯ ಗೋಡೆಯನ್ನು ಹತ್ತಲು ಪ್ರಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಮಹಿಳಾ ಪೊಲೀಸರು ಅವಳ ಬಳಿ ಹೋಗಿದ್ದಾರೆ. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಶುರು ಮಾಡಿದ್ದಳು. ಆಗ ಮಹಿಳಾ ಪೇದೆಗಳು ಆಕೆಯ ಎರಡೂ ಕೈಗಳನ್ನು ಹಿಡಿದು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲಿದ್ದವರು ಇದನ್ನು ರೆಕಾರ್ಡ್ ಮಾಡಿದ್ದು, ವೈರಲ್ ಆಗಿದೆ. ಇದಕ್ಕೆ ಮೇಲಧಿಕಾರಿಗಳು ಸ್ಪಂದಿಸಿದರು. ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.