ಬಸ್ ನಲ್ಲಿ ಹೊರಟ ಸಂದರ್ಭದಲ್ಲಿ ಮಹಿಳೆಯೊಬ್ಬರು ವಾಂತಿ ಬಂತೆಂದು ತಲೆ ಹೊರಗೆ ಹಾಕಿದ್ದಾರೆ. ಈ ವೇಳೆ ಮತ್ತೊಂದು ವಾಹನ ತಲೆಗೆ ಬಡಿದಿದ್ದು, ಎರಡು ವಾಹನಗಳ ನಡುವೆ ಮಹಿಳೆಯ ತಲೆ ನಜ್ಜುಗುಜ್ಜಾಗಿದೆ. ಈ ಘಟನೆ ಹರಿಯಾಣ ರೋಡ್ ವೇಸ್ ಬಸ್ ಗೆ ಸೇರಿದ ಘಟನೆ ಅಲಿಪುರ ಪ್ರದೇಶದಲ್ಲಿ ನಡೆದಿದೆ.
ಪ್ರತಾಪ್ ಗಢದಿಂದ ಬಂದಿದ್ದ ಬಾಬ್ಲಿ ಎಂಬುವವರು ಕಾಶ್ಮೀರ್ ಗೇಟ್ ನಿಂದ ಲುಧಿಯಾನಕ್ಕೆ ಬಸ್ ಹತ್ತಿದ್ದರು. ಈ ವೇಳೆ ಇವರು ಹತ್ತಿದ್ದ ಬಸ್ ನ್ನು ಹಿಂದಿಕ್ಕಲು ಯತ್ನಿಸಿದ ವೇಳೆಯೇ ಇವರು ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ತಲೆ ಹಾಕಿದ್ದರು. ಆಗ ತಲೆ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ.
ಈ ವೇಳೆ ಮಹಿಳೆಯೊಂದಿಗೆ ಪತಿ ಮತ್ತು ಅವರ ಮೂವರು ಮಕ್ಕಳು ಇದ್ದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಇನ್ನೊಂದು ವಾಹನಕ್ಕಾಗಿ ಶೋಧ ನಡೆಸಲಾಗುತ್ತಿದೆ.