ಎರಡು ಲೀಟರ್ ನೀರು ಕುಡಿದ ನಂತರ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಅಮೇರಿಕಾದ ಮಾಂಟಿಸೆಲ್ಲೋ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಆಶ್ಲೇ ಸಮ್ಮರ್ಸ್ ಎಂದು ಗುರುತಿಸಲಾಗಿದ್ದು, ಅವಳು ತನ್ನ ಪತಿ ಮತ್ತು ಇಬ್ಬರು ಚಿಕ್ಕ ಹೆಣ್ಣುಮಕ್ಕಳೊಂದಿಗೆ ವಾಯುವಿಹಾರಕ್ಕಾಗಿ ಸರೋವರಕ್ಕೆ ತೆರಳಿದ್ದರು. ಈ ವೇಳೆ ಅವರು 20 ನಿಮಿಷದಲ್ಲಿ ಸುಮಾರು 2 ಲೀಟರ್ ನೀರನ್ನು ಕುಡಿದಿದ್ದಾಳೆ.
ನಂತರ ಮಹಿಳೆಗೆ ತಲೆನೋವು, ಸುಸ್ತಿನ ಲಕ್ಷಣಗಳು ಕಂಡು ಬಂದಿದ್ದರಿಂದ ಎಲ್ಲರೂ ಮನೆಗೆ ಹಿಂದಿರುಗಿದ್ದರು. ಕಾರಿನಿಂದ ಇಳಿಯುವ ಸಂದರ್ಭದಲ್ಲಿ ಮಹಿಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆಕೆಯನ್ನು ಪರಿಕ್ಷೀಸಿದ ವೈದ್ಯರು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಮೆದುಳು ಊದಿಕೊಂಡಿದ್ದು, ನೀರಿನ ವಿಷತ್ವದಿಂದ ಸತ್ತಳು ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ಹೇಳಿದೆ.
ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ದೇಹಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಯಿದೆ. ನೀರಿನ ವಿಷತ್ವವು ಎಂಬುದು ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದರಿಂದ ಉಂಟಾಗುವ ಸ್ಥಿತಿಯಾಗಿದೆ. ಇದು ಕೆವವು ಸಂದರ್ಭದಲ್ಲಿ ಮಾರಕವಾಗಲಿದೆ ಎನ್ನಲಾಗಿದೆ.








