Madhya pradhesh : ಗಂಡನ ಹಿಂಸೆ ತಾಳಲಾರದೇ ಪತಿಯನ್ನ ಕೊಂದು ಗುಪ್ತಾಂಗ ಕತ್ತರಿಸಿದ ಮಹಿಳೆ…
ಮಹಿಳೆಯೊಬ್ಬಳು ಗಂಡನನ್ನ ಕೊಡಲಿಯಿಂದ ಕೊಂದು ಆತನ ಗುಪ್ತಾಂಗವನ್ನ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡದಿದೆ. ಬಿರೇಂದರ್ ಗುರ್ಜಾರ್ ಎಂಬ ವ್ಯಕ್ತಿ ಐದು ಬಾರಿ ಮದುವೆಯಾಗಿದ್ದ. ಆತನನ್ನ ಕೊಂದ ಕಾಂಚನ್ ಗುರ್ಜರ್ ಎಂಬ ಮಹಿಳೆ ಅವನ ಐದನೇ ಹೆಂಡತಿ.
ಗಂಡನನ್ನ ಕೊಲೆ ಮಾಡಿದ ನಂತರ ಕಾಂಚನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅಪರಿಚಿತ ವ್ಯಕ್ತಿಯ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಅಧಿಕಾರಿ ಅರುಣ್ ಪಾಂಡೆ ತಿಳಿಸಿದ್ದಾರೆ. ಪೊಲೀಸರು ಕೊಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಅನುಮಾಸ್ಪದವಾಗಿ ಕಂಡು ಬಂದ ಪ್ರತಿಯೊಬ್ಬರನ್ನೂ ವಿಚಾರಣೆ ನಡೆಸಿದ್ದಾರೆ. ನಂತರ ಪೊಲೀಸರು ಪತ್ನಿಯನ್ನ ವಿಚಾರಣೆ ನಡೆಸಿದಾಗ ಮಹಿಳೆ ತಾನೇ ಗಂಡನನ್ನ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪತಿ ಮಾದಕ ವ್ಯಸನಿಯಾಗಿದ್ದು ಕುಡಿದ ಅಮಲಿನಲ್ಲಿ ಸಾಕಷ್ಟು ಚಿತ್ರಹಿಂಸೆಗಳನ್ನ ನೀಡುತ್ತಿದ್ದ ಎಂದು ಕಾಂಚನ್ ಕೊಲೆಯ ಕಾರಣವನ್ನ ಬಹಿರಂಗಪಡಿಸಿದ್ದಾಳೆ. ಫೆಬ್ರವರಿ 21ರಂದು ಊಟದಲ್ಲಿ 20 ನಿದ್ದೆ ಮಾತ್ರೆಗಳನ್ನ ಬೆರಸಿ ಮೊದಲು ಕೊಡಲಿಯಿಂದ ಹಲವು ಬಾರಿ ಪತಿ ಮೇಲೆ ಹಲ್ಲೆ ನಡೆಸಿ ನಂತರ ಹರಿತವಾದ ಆಯುಧದಿಂದ ಗುಪ್ತಾಂಗ ಕತ್ತರಿಸಿ ಹತ್ಯೆ ಮಾಡಿರುವುದಾಹಿ ಮಹಿಳೆ ಒಪ್ಪಿಕೊಂಡಿದ್ದಾಳೆ
ನಂತರ ಪತಿಯ ಶವವನ್ನ ಬಟ್ಟೆಯಲ್ಲಿ ಸುತ್ತಿ ರಸ್ತೆ ಬದಿ ಎಸೆದು ಮೃತನ ಬಟ್ಟೆ ಮತ್ತು ಚಪ್ಪಲಿಯನ್ನ ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾಳೆ. ಪೊಲೀಸರ ಪ್ರಕಾರ, ಕಾಂಚನ್ ಗುರ್ಜರ್ ಮೃತ ಬೀರೇಂದ್ರ ಗುರ್ಜರ್ ಅವರ ಐದನೇ ಪತ್ನಿ. ಇದಕ್ಕೂ ಮುನ್ನ ಬೀರೇಂದ್ರನ ಕಿರುಕುಳದಿಂದ ನಾಲ್ವರು ಪತ್ನಿಯರು ಆತನನ್ನು ತೊರೆದಿದ್ದರು.
A woman who killed her husband and cut off her private parts in madhya pradhesh