7 ಜನರನ್ನು ಮದುವೆಯಾಗಿ ವಂಚಿಸಿದ ಮಹಿಳೆ
ಹರಿಯಾಣ: ಏಳು ಜನರನ್ನು ಮದುವೆಯಾಗಿ ಅವರಿಂದ ಹಣ ಮತ್ತು ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದ ಮಹಿಳೆಯನ್ನು ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಖತರನಾಖ್ ವಂಚಕಿಯದ್ದು 7 ಜನರ ತಂಡವಿದ್ದು, ಇದರಲ್ಲಿ 3 ಮಹಿಳೆಯರಿದ್ದಾರೆ. ಇವರುಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿ, ಅಲ್ಲಿ ಅಮಾಯಕರನ್ನು ಮದವೆಯಾಗಿ, ಅವರಿಂದ ಹಣ ಮತ್ತು ಚಿನ್ನಾಭರಣವನ್ನು ಲಪಟಾಯಿಸುತ್ತಿದ್ದರು. ಸಧ್ಯ ಪೊಲೀಸರು ಇವರನ್ನು ಬಂಧಿಸಿ, ಕಂಬಿ ಹಿಂದೆ ಹಾಕಿದ್ದಾರೆ.
ಈ ತಂಡ ಹಿರಿಯಾಣದಲ್ಲಿ ಮದುವೆಯಾಗದ ಅಥವಾ ವಿಚ್ಛೇದನ ಪಡೆದಿರುವ ಯುವಕರನ್ನು ಟಾರ್ಗೆಟ್ ಮಾಡಿ ಬಲೆ ಬೀಸುತ್ತಿದ್ದರು. ಇವರ ಬಲೆಗೆ ಅಮಾಯಕ 7 ಜನ ಪುರುಷರು ಬಿದ್ದಿದ್ದಾರೆ.
ಮಹಿಳೆ ಏಳು ಮಂದಿಯನ್ನು ಮದುವೆಯಾಗಿ, ಅವರೊಂದಿಗೆ ಕೆಲವು ದಿನಗಳ ಕಾಲ ಇದ್ದು ಅವರಿಗೆ ವಂಚಿಸಿ ಪರಾರಿಯಾಗುತ್ತಿದ್ದಳು. ಇವಳು ಕೊನೆಯದಾಗಿ ಬಾಧವ್ ರಾಮ್ ಕಾಲೋನಿಯ ನಿವಾಸಿ ಸುಮಿತ್ ಎಂಬುವವರ ಜೊತೆ ಮದುವೆಯಾಗಿದ್ದಳು. ಮದುವೆಯಾದ ದಿನ ರಾತ್ರಿ ಪತಿಗೆ ನಿದ್ದೆ ಮಾತ್ರೆ ನೀಡಿ ಮಲಗಿಸಿದ್ದಾಳೆ. ನಂತರ ಚಿನ್ನಾಭರಣ ಹಾಗೂ ನಗದು ದೋಚಿ ಕಾಲ್ಕಿತ್ತಿದ್ದಾಳೆ.
ಈ 24X7 ವಧು ಸಿಕ್ಕಿಬಿದ್ದಿದ್ದು 5ನೇ ಮದುವೆಯಲ್ಲಿ. ಮಾರ್ಚ್ 13ರಂದು ಮಹಿಳೆ ವ್ಯಕ್ತಿಯೋರ್ವರ ಜೊತೆ ಐದನೇ ಮದುವೆಗೆ ಸಿದ್ಧತೆ ನಡೆಸಿದ್ದಾಳೆ. ಈ ವಿಷಯ ತಿಳಿದು ವಂಚನೆಗೊಳಗಾದ ಮೂರು ಮತ್ತು ನಾಲ್ಕನೇ ಗಂಡಂದಿರು ಮದುವೆಯ ಆಮಂತ್ರಣ ಪತ್ರಗಳನ್ನು ತೋರಿಸಿ ಮೋಸದ ವೈಖರಿಯನ್ನು ಬಯಲು ಮಾಡಿದ್ದರು.
ಮಹಿಳೆಯ ವಿರುದ್ಧ ನಾಲ್ಕನೇ ಪತಿ ಪೊಲೀಸರಿಗೆ ದೂರು ನೀಡಿದ್ದು, ಇದರನ್ವಯ ಮಹಿಳೆ ಸೇರಿದಂತೆ ಏಳು ಜನರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈಕೆ ಅಂಬಾಲಾ ಜಿಲ್ಲೆಯ ಬುಟಾನಾ ಗ್ರಾಮದ ಸುನಿಲ್ ಅವರೊಂದಿಗೆ ಫೆಬ್ರವರಿ.15 ರಂದು ಮೂರನೇ ವಿವಾಹ ಮಾಡಿಕೊಂಡಿದ್ದು, ಫೆಬ್ರುವರಿ 21ರಂದು ಪಾಣಿಪತ್ ನೌಲ್ತಾ ಗ್ರಾಮದ ರಾಜೇಂದ್ರ ಅವರೊಂದಿಗೆ ನಾಲ್ಕನೇ ವಿವಾಹ, ಉತ್ತರ ಪ್ರದೇಶದ ಕುಟಾನಾ ಗ್ರಾಮದ ಗೌರವ್ ಅವರೊಂದಿಗೆ 5 ನೇ ವಿವಾಹವಾಗಿದ್ದಾಳೆ. ಹಾಗೆಯೇ ಕರ್ನಾಲ್ ಜಿಲ್ಲೆಯ ಸಂದೀಪ್ ಜೊತೆ ಆರನೇ ಮದುವೆ ಹಾಗೂ ಇತ್ತೀಚೆಗೆ ಪಾಣಿಪತ್ ಜಿಲ್ಲೆಯ ಬಧ್ವಾ ರಾಮ್ ಕಾಲೋನಿಯ ನಿವಾಸಿ ಸುಮಿತ್ ಜೊತೆ ಏಳನೇ ವದುವೆಯಾಗಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟದ್ದಾಳೆ.