ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಪ್ರಿಯರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ, ಅದನ್ನು ತಿನ್ನುವ ಮುಂಚೆ ಎಚ್ಚರ ವಹಿಸಬೇಕು ಎಂಬುವುದನ್ನು ಈ ಸ್ಟೋರಿ ಮೂಲಕ ಹೇಳುತ್ತಿದ್ದೇವೆ. ಏಕೆಂದರೆ, ಅದರಲ್ಲಿ ಹುಳು ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಎರಡು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಗಳಲ್ಲಿ ಹುಳು ಇರುವುದನ್ನು ದೃಢಪಡಿಸಿವೆ. ಹೀಗಾಗಿ ಪ್ರಯೋಗಾಲಯವು ಚಾಕೊಲೇಟ್ಗಳು ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ.
ವ್ಯಕ್ತಿಯೊಬ್ಬರು ಚಾಕೊಲೇಟ್ ನಲ್ಲಿ ಹುಳು ಇವೆ ಎಂದು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಸದ್ಯ ಅದು ಖಚಿತವಾಗಿದೆ. ಹೈದರಾಬಾದ್ನ ಅಮೀರಪೇಟ್ನ ಸೂಪರ್ಮಾರ್ಕೆಟ್ನಿಂದ ಖರೀದಿಸಿದ ಚಾಕೊಲೇಟ್ಗಳಲ್ಲಿ ಹುಳುಗಳು ಕಂಡು ಬಂದ ನಂತರ ಪರೀಕ್ಷೆಗೆ ಕಳುಹಿಸಲಾಗಿತ್ತು. ರಾಬಿನ್ ಎಂಬುವವರು ಎಕ್ಸ್ನಲ್ಲಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯದ ವರದಿ ಹಂಚಿಕೊಂಡಿದ್ದಾರೆ.