ವೀಡಿಯೋ ಮಾಡಲು ರೈಲಿನ ಮೇಲೆರಿದ ಯುವಕ – ವಿದ್ಯುತ್ ಶಾಕ್ ಹೊಡೆದು ಸಾವು

1 min read

ವೀಡಿಯೋ ಮಾಡಲು ರೈಲಿನ ಮೇಲೆರಿದ ಯುವಕ – ವಿದ್ಯುತ್ ಶಾಕ್ ಹೊಡೆದು ಸಾವು

ಇತ್ತೀಚೆಗೆ ಯುವ ಪೀಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಟೋ ಮತ್ತು ಶಾರ್ಟ್ ವೀಡಿಯೊ ಹಾಕುವ ಮೂಲಕ ಮಿಂಚಲು ಪ್ರಯತ್ನಿಸುತ್ತರುತ್ತಾರೆ. ಅದಕ್ಕಾಗಿ ಎಲ್ಲೆಂದರಲ್ಲಿ ಪೋಟೋ ವೀಡಿಯೋ ಮಾಡಲು ಮುಂದಾಗಿ ತಮ್ಮ ಪ್ರಾಣಕ್ಕೆ ಸಂಚಕಾರ ತೆಗೆದುಕೊಳ್ಳುತ್ತಿದ್ದಾರೆ.

ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಇನ್ಸ್ಟಾಗ್ರಾಂ ರೀಲ್ ಮಾಡಲು ಮುಂದಾದ ಹೈ ವೋಲ್ಟೇಜ್ ವಿದ್ಯುತ್ ನಿಂದ ಶಾಕ್ ಹೊಡೆಸಿಕೊಂಡು ಸಾವನ್ನಪ್ಪಿರು ಘಟನೆ ಗುಜರಾತ್ ರಾಜ್ಯದ ಸಬರಮತಿಯಲ್ಲಿ ನಡೆದಿದೆ. ಘಟನೆ ನಡೆದ ನಂತರ ಬಾಲಕನ ಜೊತೆಗಿದ್ದ ಸ್ನೇಹಿತ ಆತನ ಮನೆಗೆ  ಓಡಿ ಹೋಗಿ ಪೋಷಕರಿಗೆ ತಿಳಿಸಿದ್ದಾನೆ, ಸ್ಥಳಕ್ಕೆ ಧಾವಿಸಿದ ಪೊಷಕರು ಆಸ್ಪತ್ರೆಗೆ ಸೇರಿಸಿದ್ದಾರೆ ಅಷ್ಟರಲ್ಲಿ ಆ ಹುಡುಗನ ಪ್ರಾಣ ಪಕ್ಷಿ ಹಾರಿಹೋಗಿದೆ.

ಸೋಮವಾರ ಸಂಜೆ ಸಬರಮತಿಯ ರಾನಿಪ್ ಪ್ರದೇಶದ ಪ್ರೇಮ್ ಪನ್‌ಕಾಲ್ (15) ಎಂಬ ಬಾಲಕ  ಸ್ನೇಹಿತನ ಜೊತೆ ಆಗಮಿಸಿ, ನಿಂತಿದ್ದ ರೈಲಿನ ಮೇಲಿನ ವ್ಯಾಗನ್ ಹತ್ತಿ ವೀಡಿಯೋ ಮಾಡುವಾಗ ಹೈ ವೋಲ್ಟೇಜ್ ಓವರ್‌ಹೆಡ್ ತಂತಿಯೊಂದಿಗೆ ಸಂಪರ್ಕಕ್ಕೆ ಬಂದು ಸಾವನ್ನಪ್ಪಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd