ಆಗ್ರಾ: ಯುವತಿಯೊಬ್ಬರ ಮೇಲೆ ಪೊಲೀಸ್ ಪೇದೆಯೊಬ್ಬಾತ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸದ್ಯ ಈ ಆರೋಪದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆ ರಾಘವೇಂದ್ರ ಸಿಂಗ್ (27) ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆರ್‌ಕೆ ಸಿಂಗ್ ಹೇಳಿದ್ದಾರೆ.
25 ವರ್ಷದ ಯುವತಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದುಕೊಂಡಿರುವುದು ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಗುರುಗ್ರಾಮ್ ನ ಕಿಡ್ನಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ಪೊಲೀಸ್ ಪೇದೆ ಪರಸ್ಪರ ಪರಿಚಯ ಇದ್ದವರು. ಇಬ್ಬರು ಝಾನ್ಸಿಯಲ್ಲಿ ನರ್ಸಿಂಗ್ ತರಬೇತಿ ಪಡೆದಿದ್ದರು. ಆಗಿನಿಂದ ಇಬ್ಬರೂ ಪರಿಚಯವಾಗಿತ್ತು. ಹಿಂದೆ ಯುವತಿಯ ಸಹೋದರ ರಾಘವೇಂದ್ರ ಸಿಂಗ್ ಮನೆಗೆ ಭೇಟಿ ನೀಡಿದ್ದರು. ಮದುವೆ ಪ್ರಸ್ತಾಪವನ್ನು ಯುವತಿಯ ಕುಟುಂಬವು ನಿರಾಕರಿಸಿತ್ತು. ಆದರೂ ಇಬ್ಬರು ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಈ ಘಟನೆ ನಡೆಯುವುದಕ್ಕೂ ಮುನ್ನ ಯುವತಿಯು ಕಾನ್‌ಸ್ಟೇಬಲ್‌ನ ಬಾಡಿಗೆ ಕೊಠಡಿಗೆ ಭೇಟಿ ನೀಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.








