ಕೇಂದ್ರ ಸರ್ಕಾರ ಲಸಿಕೆಗಳ ಕೃತಕ ಕೊರತೆಯನ್ನು ಸೃಷ್ಟಿಸುತ್ತಿದೆ – ಆಮ್ ಆದ್ಮಿ ಪಕ್ಷ ಆರೋಪ

1 min read
scarcity of vaccines

ಕೇಂದ್ರ ಸರ್ಕಾರ ಲಸಿಕೆಗಳ ಕೃತಕ ಕೊರತೆಯನ್ನು ಸೃಷ್ಟಿಸುತ್ತಿದೆ – ಆಮ್ ಆದ್ಮಿ ಪಕ್ಷ ಆರೋಪ

ಕೇಂದ್ರವು ಕೋವಿಡ್ -19 ಲಸಿಕೆಗಳ ಕೃತಕ ಕೊರತೆಯನ್ನು ಸೃಷ್ಟಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ಆರೋಪಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತೀಶಿ, ಶಾಲೆಗಳಲ್ಲಿ ಸರ್ಕಾರದ ವ್ಯಾಕ್ಸಿನೇಷನ್ ಅಭಿಯಾನವು ನಿಂತುಹೋಗಿದೆ ಮತ್ತು ದೇಶದಲ್ಲಿಯೂ ಇದೇ ಪರಿಸ್ಥಿತಿ ಚಾಲ್ತಿಯಲ್ಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ವಿವಿಧ ದರಗಳನ್ನು ವಿಧಿಸಲಾಗಿದೆ ಎಂದು ಅಪಾದಿಸಿದ್ದಾರೆ.

ಭಾರತದಲ್ಲಿ, ಮುಖ್ಯವಾಗಿ ದೇಶದಲ್ಲೇ ತಯಾರಿಸಿದ ಎರಡು ಲಸಿಕೆಗಳು ಬಳಕೆಯಲ್ಲಿವೆ. ಅವುಗಳಲ್ಲಿ ಒಂದು ಕೋವಿಶೀಲ್ಡ್ ಮತ್ತು ಇನ್ನೊಂದು ಕೋವಾಕ್ಸಿನ್. ಇದನ್ನು ಕ್ರಮವಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ತಯಾರಿಸುತ್ತಿವೆ. ಇದಲ್ಲದೆ, ರಷ್ಯಾದ ಲಸಿಕೆ ಸ್ಪುಟ್ನಿಕ್ ಅನ್ನು ಸಹ ಸಣ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ.
Vaccination

ಸರ್ಕಾರಿ ಕೇಂದ್ರದಲ್ಲಿ ಲಸಿಕೆಗಳ ಕೊರತೆಯಿದೆ. ಅಲ್ಲಿ ಯುವಕರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ಗರಿಷ್ಠ ಬೆಲೆಗೆ ಲಸಿಕೆ ನೀಡುತ್ತಿದ್ದು, ಇದು ದೊಡ್ಡ ದಂಧೆಯಾಗಿದೆ ಎಂದು ಅತೀಶಿ ಆರೋಪಿಸಿದ್ದಾರೆ.

ಹೆಚ್ಚಿನ ಲಸಿಕೆಗಳಿಗೆ ಯಾಕೆ ತುರ್ತು ಅನುಮತಿ ನೀಡುತ್ತಿಲ್ಲ ಎಂದು ಕೇಂದ್ರವನ್ನು ಎಎಪಿ ವಕ್ತಾರರು ಪ್ರಶ್ನಿಸಿದ್ದಾರೆ. ಪ್ರಪಂಚದಾದ್ಯಂತ ಅನೇಕ ಲಸಿಕೆಗಳನ್ನು ಅನುಮೋದಿಸಲಾಗಿದೆ. 85 ದೇಶಗಳಲ್ಲಿ ಫಿಜರ್ ಲಸಿಕೆಗಳನ್ನು ಅನುಮೋದಿಸಲಾಗಿದೆ. ಮಾಡರ್ನಾ ಹಾಗೂ ಜಾನ್ಸನ್ & ಜಾನ್ಸನ್ ಲಸಿಕೆಗಳನ್ನು ಕ್ರಮವಾಗಿ 46 ಮತ್ತು 41 ದೇಶಗಳಲ್ಲಿ ಅನುಮೋದಿಸಲಾಗಿದೆ. ಹಾಗಿರುವಾಗ ಈ ಮೂರು ಲಸಿಕೆಗಳನ್ನು ತುರ್ತು ಬಳಕೆಗೆ ಏಕೆ ಅನುಮತಿಸಿಲ್ಲ?ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆಗಳನ್ನು ಅನುಮೋದಿಸಿರುವಾಗ, ಭಾರತವು ಅವುಗಳನ್ನು ಏಕೆ ನೀಡಲು ಸಾಧ್ಯವಿಲ್ಲ ಎಂದು ಎಎಪಿ ವಕ್ತಾರರು ಪ್ರಶ್ನಿಸಿದ್ದಾರೆ.

ಇಂಡಿಯಾ ಬಯೋಟೆಕ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಈ ಕೃತಕ ಕೊರತೆಯನ್ನು ಸೃಷ್ಟಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಜನತಾ ಪಕ್ಷದ ದೆಹಲಿ ಘಟಕದ ವಕ್ತಾರ ಪ್ರವೀಣ್ ಶಂಕರ್ ಕಪೂರ್, ಸರ್ಕಾರವು ಕೊರತೆಯನ್ನು ಸೃಷ್ಟಿಸದ ಕಾರಣ ಈ ಆರೋಪವು ಆಧಾರರಹಿತವಾಗಿದೆ.
ಕೊರತೆ ಉಂಟಾದರೆ ವಿದೇಶಿ ತಯಾರಕರ ಪ್ರವೇಶದ ಸಾಧ್ಯತೆಯಾಗಿರುವ ಕಾರಣ ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಈ ಕೊರತೆಯಿಂದ ಪ್ರಯೋಜನ ಪಡೆಯುವುದಿಲ್ಲ ಎಂದು ಅತೀಶಿ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಜನರನ್ನು ತೊಂದರೆಗೆ ಸಿಲುಕಿಸುವುದು ಅರವಿಂದ್ ಕೇಜ್ರಿವಾಲ್ ಅವರ ವಿಶೇಷತೆಯಾಗಿದೆ ಎಂದು ಕಪೂರ್ ಹೇಳಿದ್ದಾರೆ.
wearing masks
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#AAP #artificial #scarcity #vaccines

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd