ಈ ಬಾರಿಯ ಐಪಿಎಲ್ ಕೊನೆಯ ಹಂತಕ್ಕೆ ಬಂದು ನಿಂತಿದ್ದು, ಇಂದು ಫೈನಲ್ ಪಂದ್ಯ ಮುಗಿದರೆ, ಈ ಬಾರಿಯ ಟೂರ್ನಿಗೆ ತೆರೆ ಎಳೆದಂತಾಗುತ್ತದೆ. ಇದರ ಮಧ್ಯೆ ಹಲವಾರು ಆಟಗಾರರು ಈ ಬಾರಿ ಮಿಂಚಿದ್ದಾರೆ. ಶುಭ್ಮನ್ ಗಿಲ್ ಈ ಬಾರಿ ಆರೆಂಜ್ ಕ್ಯಾಂಪ್ ತೊಟ್ಟಿದ್ದಾರೆ.
ಈ ಮಧ್ಯೆಯೂ ಹಲವರ ಪ್ರದರ್ಶನ ಹಿರಿಯ ಆಟಗಾರರಿಗೆ ಸಂತಸ ತಂದಿದೆ. ಹೀಗಾಗಿ ಆರ್ ಸಿಬಿಯ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಈ ಬಾರಿ ತಮಗೆ ಇಷ್ಟವಾದ ಆಟಗಾರನ ಹೆಸರನ್ನು ಉಲ್ಲೇಖಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತಮ್ಮ ಗಮನ ಸೆಳೆದಿದ್ದಾರೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.
2023ರ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭಿಕ ಯಶಸ್ವಿ ಜೈಸ್ವಾಲ್ ಕೂಡ ಇದ್ದಾರೆ. ಆಡಿದ 14 ಪಂದ್ಯಗಳಿಂದ ಜೈಸ್ವಾಲ್ 48.08ರ ಸರಾಸರಿಯಲ್ಲಿ 625 ರನ್ಗಳನ್ನು ಸಿಡಿಸಿದ್ದಾರೆ. ಒಂದು ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.
ಜೋಸ್ ಬಟ್ಲರ್ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ಮತ್ತೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ವಿಶೇಷವಾಗಿ ಪವರ್ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪೈಕಿ ಇವರು ಕೂಡ ಒಬ್ಬರಾಗಿದ್ದಾರೆ.
16 ಪಂದ್ಯಗಳಿಂದ ಮೂರು ಶತಕ ಹಾಗೂ ನಾಲ್ಕು ಅರ್ಧಶತಕಗಳೊಂದಿಗೆ 851 ರನ್ ಗಳಿಸಿ 2023ರ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಅಗ್ರ ಸ್ಥಾನ ಅಲಂಕರಿಸಿರುವ ಶುಭಮನ್ ಗಿಲ್ ಬಗ್ಗೆಯೂ ಮಾತನಾಡಿದ್ದು, ಶುಭಮನ್ ಗಿಲ್ ಸ್ವಲ್ಪ ವಯಸಾದವರು. ಹಾಗಾಗಿ ಯಶಸ್ವಿ ಜೈಸ್ವಾಲ್ಗೆ ದೀರ್ಘಾವಧಿ ಅವಕಾಶಗಳನ್ನು ನೀಡಬೇಕು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಆಗುವ ಸಾಮರ್ಥ್ಯ ಯಶಸ್ವಿ ಜೈಸ್ವಾಲ್ಗೆ ಇದೆ ಎಂದು ಮುಕ್ತ ಕಂಠದಿಂದ ಹೊಗಳಿದ್ದಾರೆ.