ಯಾದಗಿರಿ: ಇಬ್ಬರು ಮಹಿಳಾ ಗ್ರಾಪಂ ಸದಸ್ಯೆಯರನ್ನು ಹಾಡಹಗಲೇ ಅಪಹರಣ (Abduction) ಮಾಡಿರುವ ಘಟನೆ ಯಾದಗಿರಿಯ ಜಿಲ್ಲಾಧಿಕಾರಿ ಸಭಾಂಗಣದ ಬಳಿ ನಡೆದಿದೆ. ಸುರಪುರ ತಾಲೂಕಿನ ನಗನೂರು ಗ್ರಾಮ ಪಂಚಾಯತ್ ಸದಸ್ಯೆಯರಾದ ಖಾನಾಪುರ ಗ್ರಾಮದ ನೀಲಗಂಗಮ್ಮ, ಫಾತಿಮಾ ಅಪಹರಣಕ್ಕೊಳಗಾದವರು. ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯ್ಕೆ ವೇಳೆ ಈ ಘಟನೆ ನಡೆದಿದೆ.
ಸಚಿವ ಶರಣಬಸಪ್ಪ ದರ್ಶನಾಪುರ ಸ್ವಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಆರೋಪ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹಾಂತಗೌಡ ಪೊಲೀಸ್ ಪಾಟೀಲ, ಅನಂತರೆಡ್ಡಿ ಕೆಂಚಗೌಡ್ರ, ಕಾಂಗ್ರೆಸ್ ಮುಖಂಡ ಶರಣಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಅಪಹರಣಕ್ಕೊಳಗಾದ ಸದಸ್ಯೆಯರ ಪತಿಯಂದಿರು ಅಪಹರಣದ ದೂರು ಸಲ್ಲಿಸಿದ್ದಾರೆ.








