ಯಂಗ್ ರೆಬಲ್ ಸ್ಟಾರ್ ಬರ್ತಡೇಗೆ ಬಿಡುಗಡೆಯಾದ ಬ್ಯಾಡ್ ಮ್ಯಾನರ್ಸ್ ಟೀಸರ್
ಸ್ಯಾಂಡಲ್ ವುಡ್ ನ ಯಂಗ್ ರೆಬೆಲ್ ಸ್ಟಾರ್ ಅಭೀಷೇಕ್ ಅಂಬರೀಷ್ ಇಂದು 29 ನೇ ಜನ್ಮ ದಿನಾಚರಣೆಯನ್ನ ಆಚರಿಸಿಕೊಳ್ಳುತ್ತಿದ್ದಾರೆ. ಜೆ ಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಜನ್ಮ ದಿನವನ್ನ ಆಚರಿಸಿಕೊಂಡಿದ್ದಾರೆ.
ಅಮರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಭಿಷೇಕ್ ಇದೀಗ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಇಂದು ಟೀಸರ್ ರಿಲೀಸ್ ಆಗಿದೆ.
ನಿರ್ದೇಶಕ ಸುಕ್ಕಾ ಸೂರಿ ನಿರ್ದೇಶನದಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದ್ದು, ಚಿತ್ರತಂಡ, ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿ ಬರ್ತ್ಡೇ ಗೆ ಉಡುಗೊರೆ ನೀಡಿದೆ.
ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಇದರೊಂದಿಗೆ ನಿರ್ದೇಶಕ ಕೃಷ್ಣ ಹಾಗೂ ಮದಗಜ ಸಿನಿಮಾ ನಿರ್ದೇಶಕ ಮಹೇಶ್ ಕುಮಾರ್ ಜೊತೆ ಹೆಸರಿಡದ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿದ್ದಾರೆ.
Abhishek Ambareesh Bad Manners | Birthday Teaser 4K | Rachita Ram Suri | Charan Raj