ಮಂಡ್ಯ: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಶಿಕ್ಷಕಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಹತ್ತಿರ ನಡೆದಿದೆ. ಸಾವನ್ನಪ್ಪಿದ ಶಿಕ್ಷಕಿಯರನ್ನು ಶ್ರೀರಂಗಪಟ್ಟಣದ ಹೊಸಹಳ್ಳಿ ಗ್ರಾಮದ ಶಾಲೆ ಶಿಕ್ಷಕಿ ನಾಗರತ್ನ, ಬಸ್ತಿಪುರ ಗ್ರಾಮದ ಶಾಲೆ ಶಿಕ್ಷಕಿ ಮಂಜುಳ ಎನ್ನಲಾಗಿದೆ.
ಶಿಕ್ಷಕಿ ನಾಗರತ್ನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮಂಜುಳ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








