ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ – ಹೊತ್ತು ಉರಿದ ವಾಹನಗಳು
ಕೊಡಗು : ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರೆಡೂ ವಾಹನಗಳು ಹೊತ್ತಿ ಉರಿದಿರುವ ಘಟನೆ ಕೊಡಗಿನ ಮಡಿಕೇರಿ ರಾಷ್ಟೀಯ ಹೆದ್ದಾರಿ 275 ರಲ್ಲಿ ನಡೆದಿದೆ. ಮೈಸೂರಿನಿಂದ ಮಂಗಳೂರಿಗೆ ಹೊರಟ್ಟಿದ್ದ ಟಯರ್ ತುಂಬಿದ್ದ ಲಾರಿ ಹಾಗೂ ಮಡಿಕೇರಿಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಕಾರು ಹಾಗೂ ಲಾರಿಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಆದ್ರೆ ಲಾರಿಯಲ್ಲಿದ್ದ ಸುಮಾರು 18 ಲಕ್ಷ ಮೌಲ್ಯದ ಟಯರ್ ಬೆಂಕಿಗಾಹುತಿಯಾಗಿದೆ. ಮಡಿಕೇರಿ ಸಮೀಪದ ಕೆದಕಲ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಸುಮಾರು 2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇನ್ನೂ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೈಲಿನಿಂದ ಬಂದವನೇ ಪ್ರಿಯತಮೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದ