ಭುವನೇಶ್ವರ್: ವ್ಯಕ್ತಿಯೊಬ್ಬ ಪತ್ನಿ ಹಾಗೂ ಮಗಳಿಗೆ ವಿಷಪೂರಿತ ಹಾವು ಕಚ್ಚಿಸಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಒಡಿಶಾ (Odisha) ಪೊಲೀಸರು ಬಂಧಿಸಿದ್ದಾರೆ. ಕೆ.ಗಣೇಶ್ (25) ಬಂಧಿತ ಆರೋಪಿ ಎನ್ನಲಾಗಿದೆ. ಆರೋಪಿ ಅಧೇಗಾಂವ್ ಗ್ರಾಮದ ತನ್ನ ಮನೆಯಲ್ಲಿ ಹೆಂಡತಿ ಬಸಂತಿ ಪತ್ರಾ (23) ಹಾಗೂ ತನ್ನ 2 ವರ್ಷದ ಮಗಳು ದೇಬಾಸ್ಮಿತಾ ಮಲಗಿದ್ದ ಸಂದರ್ಭದಲ್ಲಿ ರೂಂ ಒಳಗೆ ಹಾವು ಬಿಟ್ಟಿದ್ದಾನೆ. ನಂತರ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಿದ್ದಾನೆ.
ಈ ಕುರಿತು ಮಹಿಳೆಯ ಮಾವ ಅನುಮಾನ ವ್ಯಕ್ತಪಡಿಸಿ, ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪೊಲೀಸರು ಭಾವಿಸಿದ್ದರು. ಆನಂತರ ಒಂದು ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಧಾರ್ಮಿಕ ಕಾರ್ಯಕ್ರಮಕ್ಕೆ ಎಂದು ಹಾವು ತಂದು ರೂಂ ಒಳಗೆ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಆತನ ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಪೊಲೀಸರು ಹೇಳಿದ್ದಾರೆ.