ನವದೆಹಲಿ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಹೃದಯಾಘಾತ ಸಂಭವಿಸಿದಾಗ ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಲು ಸಲಹೆ ನೀಡುತ್ತಾರೆ. ಆದರೆ ಅಮಿತಾಬ್ ಬಚ್ಚನ್ ಕಾಲಿನ ಸಮಸ್ಯೆಯಿದ್ದು, ಹೀಗಾಗಿ ಕಾಲಿಗಾಗಿ ಅವರು ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಬಾಹ್ಯ ಆಂಜಿಯೋಪ್ಲ್ಯಾಸ್ಟಿ ಎಂದರೆ ಅಪಧಮನಿಯ ಹೊರಭಾಗದಲ್ಲಿ ರಕ್ತ ನಾಳಗಳನ್ನು ತೆರೆಯಲು ಆಂಜಿಯೋಪ್ಲ್ಯಾಸ್ಟಿ ವೈದ್ಯಕೀಯ ಬಲೂನ್ ನ್ನು ಬಳಸಲಾಗುತ್ತದೆ. ಹೃದಯದಂತೆ ದೇಹದ ಇನ್ನಿತರ ಭಾಗಗಗಳಲ್ಲಿಯೂ ಸಮಸ್ಯೆ ಕಂಡುಬಂದಾಗ ಅಥವಾ ರಕ್ತದ ಹರಿವು ಸರಿಯಾಗಿಲ್ಲದಿದ್ದಾಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ರಕ್ತನಾಳ ಅಗಲಗೊಳಿಸಲು ಈ ಚಿಕಿತ್ಸೆ ಮಾಡಲಾಗುತ್ತದೆ. ಸೊಂಟದ ಅಪಧಮನಿ, ತೊಡೆಯ ಅಪಧಮನಿ, ಮೊಣಕಾಲಿನ ಹಿಂದಿನ ಅಪಧಮನಿ, ಕೆಳ ಕಾಲಿನ ಅಪಧಮನಿಗೂ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ಈ ಸಮಸ್ಯೆ ಕಂಡುಬಂದರೆ, ಎದೆನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ಕಾಡುತ್ತದೆ. ವಿಪರೀತವಾಗಿ ಬೆವರಲು ಆರಂಭವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಯ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ.