ನಟ ಧ್ರುವ ಸರ್ಜಾ (Dhruva Sarja) ಅವರ ಜಿಮ್ ಟ್ರೇನರ್ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಜಿಮ್ ಟ್ರೇನರ್ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ. ಬೆಂಗಳೂರಿನ ಬನಶಂಕರಿಯ ಕೆ.ಆರ್.ರಸ್ತೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಅಪರಿಚಿತರು ಬೈಕ್ ನಲ್ಲಿ ಬಂದು ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪ್ರಶಾಂತ್ ಬನಶಂಕರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಶಾಂತ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ಧ್ರುವ ಸರ್ಜಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜೊತೆಗಿರುತ್ತೇನೆ. ಪ್ರಶಾಂತ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.