ಚಂದನವನದ ನಟ ಡಾಲಿ ಧನಂಜಯ (Daali Dhananjay) ಅಜ್ಜಿ ನಿಧನರಾಗಿದ್ದಾರೆ.
ಅಜ್ಜಿಮಲ್ಲಮ್ಮ (Mallamma) ತಮ್ಮ 95ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಸಾವನ್ನಪ್ಪಿದ್ದಾರೆ.
ಅಜ್ಜಿ ಮಲ್ಲಮ್ಮಗೆ 5 ಜನ ಮಕ್ಕಳಿದ್ದರು. ಅದರಲ್ಲಿ ಡಾಲಿ ಅವರ ತಂದೆ ಅಡವಿಸ್ವಾಮಿ ಎರಡನೇಯವರು. ಆದರೆ, ಈಗ ವಯೋಸಹಜ ಕಾಯಿಲೆಯಿಂದಾಗಿ ಅಜ್ಜಿ ಮಲ್ಲಮ್ಮ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಜ್ಜಿ ಜೊತೆ ಡಾಲಿ ತುಂಬಾ ಅಟ್ಯಾಚ್ ಆಗಿದ್ದರು. ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಮಲ್ಲಮ್ಮ ಕೂಡ ಬಂದಿದ್ದರು. ಆಗ ಮೊಮ್ಮಗ ಡಾಲಿಯ ಮದುವೆ ಕುರಿತು ಮಾತನಾಡಿದ್ದರು. ಧನಂಜಯಗೆ ಬೇಗ ಮದುವೆ ಮಾಡಿಸಬೇಕು ಎಂದು ಅಜ್ಜಿ ಹೇಳಿದ್ದರು. ಆದರೆ, ಮೊಮ್ಮಗನ ಆಸೆ ಕೊನೆಗೂ ಈಡೇರದೆ ಹೋಯಿತು.








