ವ್ಯಕ್ತಿ ಮೇಲೆ ಹಲ್ಲೆ ಆರೋಪ – ವಿಚಾರಣೆ ಆಗಮಿಸಿದ ನಟ ಜೈಜಗದೀಶ್…
ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ನಟ ಜಗದೀಶ್ ಇಂದು ಬೆಳ್ಳೂರು ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಜೈ ಜಗದೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜಯರಾಮೇಗೌಡ ಎನ್ನುವವರು ನಾಗಮಂಗಲ ತಾಲೂಕಿನ ದೂರು ದಾಖಲಿಸಿದ್ದರು.
ಜೂನ್ 5 ರಂದು ಈ ಘಟನೆ ನಡೆದಿದ್ದು ಈ ಘಟನೆ ಕುರಿತು ಮಾತನಾಡಿದ ಜಗದೀಶ್ ಹೈವೆಯಲ್ಲಿ ಬಾಟಲಿಯನ್ನ ನನ್ನ ಕಾರಿನ ಮೇಲೆ ಎಸೆದ ವ್ಯಕ್ತಿಯನ್ನ ಪ್ರಶ್ನಿಸಿದೆ. ವೇಳೆ ಆತ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ. ಹಿನ್ನಲೆಯಲ್ಲಿ ಗಲಾಟೆಯಾಗಿತ್ತು. ಇದರಲ್ಲಿ ನನ್ನದೇನು ನಾನು ಹಲ್ಲೆ ಮಾಡಿಲ್ಲ ಎಂದು ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
ನಡೆದಿದ್ದು ಸಣ್ಣ ಘಟನೆ ಇದರ ಬಗ್ಗೆ ಈಗ ರೆಕ್ಕೆಪುಕ್ಕ ಕಟ್ಟುತ್ತಿದ್ದಾರೆ ಘಟನೆಯಿಂದೆ ಯಾರಿದ್ದಾರೋ ಗೊತ್ತಿಲ್ಲ ಎಂದು ಬಾಟಲಿ ಆಕಡೆ ಎಸೆಯಪ್ಪ ಅಮತ ಹೇಳಿದ್ದಕ್ಕೆ ಕೆಟ್ಟ ಮಾತುಗಳಿಂದ ನಿಂದಿಸಿದ ಎಂದು ಜಗದೀಶ್ ಹೇಳಿದ್ದಾರೆ.