ಕಾನ್ಸ್ 2022 ಸಿನಿಮೋತ್ಸವದಲ್ಲಿ ಮೋದಿ ಪರ ಬ್ಯಾಟ್ ಬೀಸಿದ ನಟ ಮಾಧವನ್
ಕಾನ್ಸ್ 2022 ಸಿನಿಮೋತ್ಸವದಲ್ಲಿ ನಟ ಮಾಧವನ್ ಭಾಗಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲೀಕರಣ ಭಾರತದ ಬಗ್ಗೆ ಮಾತನಾಡುತ್ತಾ ಅವರ ಪರ ಬ್ಯಾಟ್ ಬೀಸಿದ್ದಾರೆ..
ಪ್ರಧಾನಿ ಮೋದಿ ಅವರು ಡಿಜಿಟಲೀಕರಣಕ್ಕೆ ಒತ್ತು ನೀಡಿದಾಗ ಇದು ಕೆಲಸ ಮಾಡುವುದಿಲ್ಲ ಎಂದು ಹೇಳುವ ಆರ್ಥಿಕ ಸಮುದಾಯದ ನಡುವೆ ಪ್ರಪಂಚದಾದ್ಯಂತ ನೆಗೆಟಿವಿಟಿ ಹರಡಿತ್ತು.. ಆದ್ರೆ ಈಗ ಭಾರತ ಬದಲಾಗ್ತಿದೆ ಎಂದು ಅವರು ಪ್ರಧಾನಿ ಮೋದಿಯವರ ಡಿಜಿಟಲ್ ಆರ್ಥಿಕತೆಯ ಬಗ್ಗೆ ಹೇಳಿದರು.
ಭಾರತವನ್ನು ಪ್ರತಿನಿಧಿಸುವ ತಂಡದೊಂದಿಗೆ 75 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ನಟ ಆರ್ ಮಾಧವನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಾವಧಿಯಲ್ಲಿ ಭಾರತದಲ್ಲಿ “ಸೂಕ್ಷ್ಮ-ಆರ್ಥಿಕತೆ” ಯಶಸ್ಸನ್ನು ಶ್ಲಾಘಿಸಿದರು.
ರೈತರಿಗೆ ಸ್ಮಾರ್ಟ್‌ಫೋನ್ ಬಳಸುವುದು ಅಥವಾ ಲೆಕ್ಕಪತ್ರ ನಿರ್ವಹಣೆ ಮಾಡುವುದು ಗೊತ್ತಿಲ್ಲದ ದೇಶದಲ್ಲಿ ಡಿಜಿಟಲೀಕರಣವು “ದೊಡ್ಡ ವಿಪತ್ತು” ಎಂದು ನಂಬಿದ್ದರು. ಆದರೆ ಒಂದೆರಡು ವರ್ಷಗಳಲ್ಲಿ “ಇಡೀ ಕಥೆ ಬದಲಾಗಿದೆ” ಎಂದು ಅವರು ಹೇಳಿದರು.