ಜನಪ್ರಿಯ ಚಿತ್ರಗಳಾದ ಸ್ತ್ರೀ-2 ಮತ್ತು ವೆಲ್ಕಮ್ ನಲ್ಲಿ ನಟಿಸಿದ್ದ ನಟ ಮುಸ್ತಾಕ್ ಖಾನ್ ಅಪಹರಣಕ್ಕೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 20ರಂದು ದೆಹಲಿಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ ಮುಸ್ತಾಕ್ ಅವರನ್ನು ದುಷ್ಕರ್ಮಿಗಳು ಅಪಹರಿಸಿ ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು.
ಅಪಹರಣಕಾರರು ಬಂದೂಕು ತೋರಿಸಿ 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ, ಅವರ ಮಗನಿಗೆ ಕರೆ ಮಾಡಿ ₹1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದೃಷ್ಟವಶಾತ್, ಮುಸ್ತಾಕ್ ಅವರು ಹೇಗೋ ಅಪಹರಣಕಾರರ ಸೆರೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರ ಸ್ನೇಹಿತ ಶಿವಂ ತಿಳಿಸಿದ್ದಾರೆ.
ಈ ಘಟನೆಯಿಂದ ಚಿತ್ರರಂಗದಲ್ಲಿ ಆತಂಕ ಮನೆ ಮಾಡಿದೆ, ಮತ್ತು ಪೊಲೀಸರು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.