ನಟ ಆರ್.ಎಸ್. ಶಿವಾಜಿ (R.s Shivaji)(66) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ನಟ ಶಿವಾಜಿ ಅವರು ಹಲವಾರು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಿರಿಯ ನಟರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಸುರಿದಿದ್ದಾರೆ. ನಟ ಶಿವಾಜಿ ಅವರು ತೆಲುಗು- ತಮಿಳಿನಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಅವರು ನಟ ಕಮಲ್ ಹಾಸನ್ (Kamal Haasan) ಜೊತೆ ಸಾಕಷ್ಟು ಸಿನಿಮಾಗಳಲ್ಲಿ ತೆರೆಹಂಚಿಕೊಂಡು ಅವರೊಂದಿಗೆ ಆಪ್ತರಾಗಿದ್ದರು.
ಅವರು ಕೊನೆಯದಾಗಿ ಸಾಯಿ ಪಲ್ಲವಿ (Sai Pallavi) ನಟನೆಯ ‘ಗಾರ್ಗಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.