ನಟ ರಜನಿಕಾಂತ್ ಅವರ ಪತ್ನಿ ಲತಾ (Lata) ಅವರಿಗೆ ಜಾಮೀನು ಮಂಜೂರಾಗಿದೆ.
ಜನವರಿ 6ರೊಳಗೆ ಕೋರ್ಟ್ ಗೆ ಹಾಜರಾಗಬೇಕೆಂದು ಬೆಂಗಳೂರಿನ (Bangalore) 1ನೇ ಎಸಿಎಂಎಂ ನ್ಯಾಯಾಲಯ ಹೇಳಿತ್ತು. ಅದರಂತೆ ಲತಾ ಅವರು ಖುದ್ದಾಗಿ ಬೆಂಗಳೂರಿನ ಕೋರ್ಟ್ ಗೆ ಹಾಜರಾಗಿದ್ದರು. ಅವರ ಮೇಲೆ ಜಾಮೀನು ರಹಿತ ಪ್ರಕರಣ ಇರುವ ಹಿನ್ನೆಲೆಯಲ್ಲಿ ಖುದ್ದಾರಿ ಹಾಜರಾಗಬೇಕೆಂದು ವಕೀಲರು ಮನವಿ ಮಾಡಿದ್ದರು. ಹೀಗಾಗಿ ಹಾಜರಾಗಿದ್ದರು.
ಅಲ್ಲದೇ, ಜಾಮೀನು ನೀಡುವಂತೆ ಲತಾ ಪರ ವಕೀಲರು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಷರತ್ತು ಬದ್ದ ಜಾಮೀನು (Bail) ಮಂಜೂರು ಮಾಡಿದೆ. ಎರಡು ವೈಯಕ್ತಿಕ ಬಾಂಡ್ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಪುತ್ರಿ ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಲತಾ ಮೇಲೆ ಐಪಿಸಿ 463 ಅಡಿ ಕೇಸ್ ದಾಖಲಾಗಿತ್ತು.