ಕೋವಿಡ್-19 ಸೋಂಕಿನಿಂದ ಹಿರಿಯ ನಟ ರಣಧೀರ್ ಕಪೂರ್ ಆಸ್ಪತ್ರೆಗೆ ದಾಖಲು

1 min read
Randhir Kapoor tested positive

ಕೋವಿಡ್-19 ಸೋಂಕಿನಿಂದ ಹಿರಿಯ ನಟ ರಣಧೀರ್ ಕಪೂರ್ ಆಸ್ಪತ್ರೆಗೆ ದಾಖಲು

ಹಿರಿಯ ನಟ ರಣಧೀರ್ ಕಪೂರ್ ಅವರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೋಕಿಲಾಬೆನ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. 74 ವರ್ಷದ ನಟ ಮುಂಬೈನ ಉಪನಗರ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಚಿಕಿತ್ಸೆಗಾಗಿ ಅವರನ್ನು ಕಳೆದ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚಿಂತಿಸಬೇಕಾಗಿಲ್ಲ ಎಂದು ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರಾದ ಡಾ.ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
Randhir Kapoor tested positive

ನಟ ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ಕಪೂರ್ ಅವರ ಹಿರಿಯ ಮಗ ರಣಧೀರ್ ಕಪೂರ್ ತಮ್ಮ ಕಿರಿಯ ಸಹೋದರರಾದ ರಿಷಿ ಕಪೂರ್ (67) ಮತ್ತು ರಾಜೀವ್ ಕಪೂರ್ (58) ಅವರನ್ನು ಒಂದು ವರ್ಷದ ಅವಧಿಯಲ್ಲಿ ಕಳೆದುಕೊಂಡಿದ್ದಾರೆ.

ಕ್ಯಾನ್ಸರ್ ವಿರುದ್ಧ ಎರಡು ವರ್ಷ ಹೋರಾಡಿದ ನಂತರ 2020 ರ ಏಪ್ರಿಲ್ 30 ರಂದು ರಿಷಿ ಕಪೂರ್ ನಿಧನರಾದರು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನರಾದರು. ಕಲ್ ಆಜ್ ಔರ್ ಕಲ್, ಜೀತ್, ಜವಾನಿ ದಿವಾನಿ, ಲಫಾಂಗೆ, ರಾಂಪುರ್ ಕಾ ಲಕ್ಷ್ಮಣ, ಹಾಥ್ ಕಿ ಸಫೈ ಮುಂತಾದ ಪಾತ್ರಗಳಿಂದ ಕಪೂರ್  ಹೆಸರುವಾಸಿಯಾಗಿದ್ದಾರೆ.

ಅವರು ನಟಿ ಬಬಿತಾ ಅವರನ್ನು ವಿವಾಹವಾಗಿದ್ದು, ನಂತರ ಬೇರ್ಪಟ್ಟರು. ರಣಧೀರ್ ಕಪೂರ್ ಮತ್ತು ಬಬಿತಾ ದಂಪತಿಗೆ ಕರಿಷ್ಮಾ ಮತ್ತು ಕರೀನಾ ಎಂಬ ಹೆಣ್ಣು ಮಕ್ಕಳಿದ್ದಾರೆ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

#RandhirKapoor #testedpositive

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd