ಟಾಲಿವುಡ್ ನಟ ಶರ್ವಾನಂದ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಪತ್ನಿ ರಕ್ಷಿತಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ಈ ಕುರಿತು ನಟ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಮಾರ್ಚ್ 6 ಶರ್ವಾನಂದ್ ಹುಟ್ಟುಹಬ್ಬ ವಾಗಿದ್ದು, ಮಗಳ ಆಗಮನದ ಕುರಿತು ಅವರು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಮಗಳು ಹುಟ್ಟಿರುವ ವಿಷಯ ತಿಳಿಸಿ, ಈ ವರ್ಷ ಆಶೀರ್ವಾದದೊಂದಿಗೆ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದೇನೆ ಎಂದಿದ್ದಾರೆ.
ಲೀಲಾ ದೇವಿ ಮೈನೇನಿ ಹೆಸರು ಇಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ ಪತ್ನಿ ರಕ್ಷಿಕಾ ಮಗಳ ಕಾಲು ಹಿಡಿದುಕೊಂಡಿರುವ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ. ಆದರೆ ಎಲ್ಲೂ ಕೂಡ ಮಗಳ ಮುಖ ರಿವೀಲ್ ಮಾಡಿಲ್ಲ.
ರನ್ ರಾಜಾ ರನ್, ಎಕ್ಸ್‌ಪ್ರೆಸ್ ರಾಜಾ, ಜಾನು, ಮಹಾಸಮುದ್ರಂ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಶರ್ವಾನಂದ್ ನಟಿಸಿದ್ದಾರೆ. ಹಿಂದಿನ ವರ್ಷ ರಕ್ಷಿತಾ ರೆಡ್ಡಿ ಅವರೊಂದಿಗೆ ವಿವಾಹವಾಗಿದ್ದರು.








