ಇಂದು ಒಂದೇ ದಿನ ಮೂವರು ಸೆಲೆಬ್ರಿಟಿಗಳು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಸೆಪ್ಟೆಂಬರ್ 18 ಚಿತ್ರ ರಸಿಕರ ಪಾಲಿಗೆ ವಿಶೇಷ ದಿನವಾಗಿದೆ.
ಇಂದು ಹಿರಿಯ ನಟ ವಿಷ್ಣುವರ್ಧನ್, ಉಪೇಂದ್ರ (Upendra) ಹಾಗೂ ಶ್ರುತಿ ಅವರ ಜನ್ಮದಿನವಾಗಿದೆ. ಹೀಗಾಗಿ ಅಭಿಮಾನಿಗಳು ನೆಚ್ಚಿನ ನಟರ ಹೆಸರಿನಲ್ಲಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಉಪೇಂದ್ರ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅನೇಕರು ಶುಭ ಕೋರುತ್ತಿದ್ದಾರೆ. ಇಂದು ಗಣೇಶ ಚತುರ್ಥಿ. ಇದರೊಂದಿಗೆ ಉಪ್ಪಿ ಹುಟ್ಟು ಹಬ್ಬ. ಹೀಗಾಗಿ ಜನ್ಮದಿನದಂದು ‘ಯುಐ’ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಆಚರಣೆ ನಡೆಯುತ್ತಿದೆ.
ಉಪೇಂದ್ರ ಅವರು ಚಿತ್ರರಂಗಕ್ಕೆ ನಿರ್ದೇಶಕರಾಗಿ ಕಾಲಿಟ್ಟವರು. ‘ತರ್ಲೆ ನನ್ಮಗ’ ಅವರ ನಿರ್ದೇಶನದ ಮೊದಲ ಚಿತ್ರವಾಗಿದೆ. ನಂತರ ‘ಶ್..’ ‘ಓಂ’, ‘ಆಪರೇಷನ್ ಅಂತ’ ‘ಎ’ ಸೇರಿದಂತೆ ಹಲವು ಚಿತ್ರಗಳಿಗೆ ಕ್ಯಾಪ್ ಹಾಕಿದ್ದರು. ಆನಂತರ ಅವರು ನಾಯಕ ನಟರಾಗಿ ಕೂಡ ಮಿಂಚಿದರು. ಸದ್ಯ ಯುಐ ರಿಲೀಸ್ ಆಗುತ್ತಿದ್ದು, ಟೀಸರ್ ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.