ಕನ್ನಡದ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಈಗ ಅವರ ಗುಣಗಳ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಹಾಡಿ ಹೊಗಳಿದ್ದಾರೆ.
ಚಾವಾ’ ಎಂಬ ಸಿನಿಮಾದಲ್ಲಿ ರಶ್ಮಿಕಾ ಜೊತೆ ಕತ್ರಿನಾ ಕೈಫ್(Katrina Kaif) ಪತಿ ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವೇಳೆ ರಶ್ಮಿಕಾ ಅವರ ಬಗ್ಗೆ ಮಾತನಾಡಿದ್ದಾರೆ. ರಶ್ಮೀಕಾ ಅದ್ಭುತ ವ್ಯಕ್ತಿ, ಯಾವಾಗ ಭೇಟಿಯಾದರೂ ಸದಾ ಪಾಸಿಟಿವಿಯಿಂದ ಇರುತ್ತಾರೆ ಎಂದು ಗುಣಗಾನ ಮಾಡಿದ್ದಾರೆ.
ಸೆಟ್ಗೆ ರಶ್ಮಿಕಾ ಬಂದಾಗ ಪಾಸಿಟಿವಿ ಇರುತ್ತದೆ. ಅವರು ಕೆಲಸವನ್ನು ಬೆಂಬಲಿಸುತಾರೆ. ಚಾವಾ ಸಿನಿಮಾದಲ್ಲಿ ಕೆಲಸ ಮಾಡುವಾಗ ರಶ್ಮಿಕಾ ಜೊತೆ ಉತ್ತಮ ಸಮಯ ಕಳೆದಿದ್ದೇನೆ. ಯಾವಾಗಲೂ ಅವರು ಖುಷಿಯಿಂದ ಇರುತ್ತಾರೆ. ಅದು ಹೇಗೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಛತ್ರಪತಿ ಸಂಭಾಜಿ ಅವರ ಜೀವನ ಕಥೆ ಆಧರಿಸಿ ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿದ್ದು, ಅದಕ್ಕಾಗಿ 4 ವಾರಗಳ ಕಾಲ ನಟಿ ಮರಾಠಿ ಕಲಿಯಲು ವಿಶೇಷ ತರಬೇತಿ ಕೂಡ ಪಡೆದಿದ್ದಾರೆ. ಚಾವಾ’ (Chhava) ಸಿನಿಮಾದಲ್ಲಿನ ತನ್ನ ಪಾತ್ರಕ್ಕೆ ರಶ್ಮಿಕಾ ಧ್ವನಿ ನೀಡಲಿದ್ದಾರೆ. ಈ ಇಬ್ಬರೂ ತಾರೆಯರು ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಡಿಸೆಂಬರ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.