ತಮಿಳು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕ್ಯಾಪ್ಟನ್ ಜಯಕಾಂತ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ತುಂಬಾನೆ ಕೈ ಕೊಟ್ಟಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದರ ಮಧ್ಯೆ ಕೊರೊನಾ ಕೂಡ ಅವರನ್ನು ಆವರಿಸಿತ್ತು. ಆದರೆ, ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಕೊರೊನಾ ಕಾಣಿಸುತ್ತಿದ್ದಂತೆ ಕೂಡಲೇ ಅವರನ್ನು ಐಸಿಯೂಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ತಮಿಳು ನಾಡಿನ ಡಿಎಂಡಿಕೆ (DMDK) ಮುಖ್ಯಸ್ಥರೂ ಆಗಿದ್ದ ಕ್ಯಾಪ್ಟನ್ ವಿಜಯಕಾಂತ್ ಕೆಲವು ದಿನಗಳಿಂದ ಜ್ವರದಿಂದಾಗಿ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು. ಆದರೆ, ಆ ನಂತರ ಅವರ ಆರೋಗ್ಯ ತೀರಾ ಹದಗೆಡುತ್ತ ಬಂದಿತು ಎನ್ನಲಾಗಿದೆ.
ಆದರೆ, ಪಕ್ಷ ಮಾತ್ರ ಇದನ್ನು ಒಪ್ಪಿಕೊಂಡಿರಲಿಲ್ಲ. ಇನ್ನೆರಡು ದಿನಗಳಲ್ಲಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂದು ಹೇಳಿತ್ತು. ಆದರೆ, ಮನೆಗೆ ಬಾರದೇ, ಬಾರದ ಲೋಕಕ್ಕೆ ಕ್ಯಾಪ್ಟನ್ ವಿಜಯಕಾಂತ್ ಪ್ರಯಾಣ ಬೆಳೆಸಿದ್ದಾರೆ.
ಕ್ಯಾಪ್ಟನ್ ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಸಿನಿಮಾದ ಮೂಲಕ ಅವರು ತಮ್ಮ ವೃತ್ತಿ ಆರಂಭಿಸಿದ್ದರು. 154 ಚಿತ್ರಗಳಲ್ಲಿ ನಟಿಸಿದ್ದರು. ಆನಂತರ ರಾಜಕೀಯ ರಂಗ ಪ್ರವೇಶಿಸಿ, ಉತ್ತುಂಗಕ್ಕೆ ಏರಿದ್ದರು.