ನಟ ವಿಕ್ರಂಜೀತ್ Vikrantjeet ಕನ್ವರ್ ಪಾಲ್ ನಿಧನ
ಮುಂಬೈ : ಸೇನಾಧಿಕಾರಿಯಾಗಿ ನಿವೃತ್ತಿ ಹೊಂದಿದ ಬಳಿಕ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದ ನಟ ವಿಕ್ರಂಜೀತ್ ಕನ್ವರ್ ಪಾಲ್ ನಿಧನರಾಗಿದ್ದಾರೆ.
52 ವರ್ಷದ ವಿಕ್ರಂಜಿತ್ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಎಂದು ನಟ ಅಶೋಕ್ ಪಂಡಿತ್ ಮಾಹಿತಿ ನೀಡಿದ್ದಾರೆ.
ವಿಕ್ರಂಜೀತ್ ಅವರು 2003ರಿಂದ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದು, ಇಂದು ಬೆಳಗ್ಗೆ ಕೊರೊನಾದಿಂದಾಗಿ ವಿಕ್ರಂಜಿತ್ ಸಾವನ್ನಪ್ಪಿರುವ ಸುದ್ದಿ ಆಘಾತವನ್ನುಂಟು ಮಾಡಿತು.
ಓರ್ವ ನಿವೃತ್ತ ಸೇನಾಧಿಕಾರಿಯಾಗಿದ್ದ ವಿಕ್ರಂಜಿತ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಅವರ ಕುಟುಂಬ ಮತ್ತು ಆಪ್ತರ ಜೊತೆ ನಾವಿದ್ದೇವೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.