ನಟಿ ನಿತ್ಯಾ ಮೆನನ್, ಪಾರ್ವತಿ ಮೆನನ್ ಪ್ರಗ್ನೆಂಟ್ ?? ಅಸಲಿ ಕಹಾನಿ ಇದು..
ಇನ್ಸ್ಟಾಗ್ರಾಮ್ ನಲ್ಲಿ ನಟಿ ನಿತ್ಯಾ ಮೆನನ್ ಶೇರ್ ಮಾಡಿರುವ ಫೋಟೋವೊಂದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಟಿ ನಿತ್ಯಾ ತಮ್ಮ ಪ್ರೆಗ್ನೆನ್ಸಿ ಕಿಟ್ ಫೊಟೋ ಹಂಚಿಕೊಂಡಿದ್ದು, ಅದಕ್ಕೆ ‘ದಿ ವಂಡರ್ ವುಮೆನ್’ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಪೋಸ್ಟ್ ನೋಡಿದ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ನಿತ್ಯಾ ಮೆನನ್ ಗರ್ಭಿಣಿ, ಮದುವೆಯಾಗದೆ ತಾಯಿಯಾಗುವುದು ಹೇಗೆ ಎಂಬ ನೂರಾರು ಕಾಮೆಂಟ್ಗಳು ಅಂತರ್ಜಾಲವನ್ನು ಬೆಚ್ಚಿಬೀಳಿಸಿದೆ.
ನಿಜ ಸಂಗತಿ ಏನೆಂದರೆ ನಿತ್ಯಾ ಮೆನನ್ ಒಂದು ಸಿನಿಮಾದಲ್ಲಿ ಗರ್ಭಿಣಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಶೀರ್ಷಿಕೆ ‘ವಂಡರ್ ವುಮೆನ್’ ಎಂದು ವರದಿಯಾಗಿದೆ. ಅಂಜಲಿ ಮೆನನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಶುಕ್ರವಾರದಿಂದ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಿತ್ಯಾ ಮೆನನ್ ಆ ಫೋಟೋ ಶೇರ್ ಮಾಡಿ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಗ್ಲಾಮರ್ ಪಾತ್ರಗಳಿಂದ ದೂರವಿದ್ದು, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಿತ್ಯಾ ಸುತ್ತ ಕಥೆ ಸುತ್ತುತ್ತದೆ ಎಂದು ವರದಿಯಾಗಿದೆ.
ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಪಾರ್ವತಿ ಮೆನನ್ ಸಹ ಅದೇ ಗರ್ಭಿಣಿ ಟೆಸ್ಟ್ ಕಿಟ್ ಫೋಟೋವನ್ನು ಶೇರ್ ಮಾಡಿ ಶಾಕ್ ನೀಡಿದ್ದಾರೆ. ನಿತ್ಯಾ ಮೆನನ್ ಮತ್ತು ಪಾರ್ವತಿ ಒಂದೇ ಸಮಯದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದರಿಂದ, ಇಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Actors Parvathy and Nithya Menon post pics of positive pregnancy tests, raise intrigue