Actress Hansika marriage – ತಮಿಳು ಮತ್ತು ತೆಲುಗು ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಅವರ ಮದುವೆ ಸುದ್ದಿ ಎಲ್ಲೆಡೆ ವೈರಲ್ಲ ಆಗುತ್ತಿದೆ.
ಖ್ಯಾತ ನಟಿ ಹನ್ಸಿಕಾ ಸೈಲೆಂಟ್ ಆಗಿ ಇದೇ ವರ್ಷ ಡಿಸೆಂಬರ್ನಲ್ಲಿ ಹಸೆಮಣೆ ಏರುತ್ತಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ನಟಿ ಹನ್ಸಿಕಾ ಅವರು ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದು ಕೊನೆಗೂ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಹನ್ಸಿಕಾ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ವರದಿಗಳ ಪ್ರಕಾರ ಹನ್ಸಿಕಾ ಮುಂಬೈ ಮೂಲದ ಖ್ಯಾತ ಉದ್ಯಮಿ ಜೊತೆ ಡೇಟಿಂಗ್ನಲ್ಲಿ ಇದ್ದರೂ ತಮ್ಮ ಸಂಬಂಧವನ್ನು ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಕಾಪಾಡಿಕೊಂಡಿದ್ದರು.
ಇದೀಗ ಅವರ ಜೊತೆಯೇ ಮದುವೆ ಯಾಗಲು ಅದ್ದೂರಿಯಾಗಿ ತಯಾರಿ ನಡೆಸುತ್ತಿದ್ದರೆ
ಈಗಾಗಲೇ ಮದುವೆಗೆ ಹನ್ಸಿಕಾ ಮತ್ತು ಹುಡುಗನ ಕಡೆಯವರು ಜಾಗವನ್ನು ಫಿಕ್ಸ್ ಮಾಡಿದ್ದಾರೆ. ಹನ್ಸಿಕಾ ಜೈಪುರದಲ್ಲಿ ಸುಮಾರು 450 ವರ್ಷಗಳ ಹಿಂದಿನ ಅರಮನೆ ಆದ ಮಂಡೋಟ ಕೋಟೆಯನ್ನು ಈಗಾಗಲೇ ಬುಕ್ ಮಾಡಿದ್ದಾರೆ.
ಸುಮಾರು 10 ದಿನಗಳ ಕಾಲ ಮದುವೆ ನಡೆಯಲಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಮದುವೆ ನಡೆಯುವ ದಿನಾಂಕ ಮತ್ತು ಹುಡುನ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಹಾಗೂ ತನ್ನ ಮದುವೆ ಸುದ್ದಿ ಬಗ್ಗೆ ಹನ್ಸಿಕಾ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.
Actress Hansika-Actress Hansika is rising