ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ನಂಟಿನ ಕೇಸ್ನಲ್ಲಿ ಮಾದಕ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸತತ 7 ಗಂಟೆಗಳ ವಿಚಾರಣೆ ನಡೆಸಿದ ಬಳಿಕ ನಟಿ ರಾಗಿಣಿಯನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ರವಿಶಂಕರ್ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದರು.
ರವಿಶಂಕರ್ ಹಾಗೂ ರಾಗಿಣಿಯನ್ನು ಸಿಸಿಬಿ ಪೊಲೀಸರು ಮುಖಾಮುಖಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕ ಮಾಹಿತಿ ಅಧರಿಸಿದ ಮೊದಲು ಎಫ್ಐಆರ್ ದಾಖಲಿಸಿ ನಂತರ ಅರೆಸ್ಟ್ ಮಾಡಲಾಗಿದೆ.
ಡ್ರಗ್ಸ್ ಜಾಲದ ಆರೋಪದಡಿ ಸ್ಯಾಂಡಲ್ವುಡ್ನ ಮೊದಲ ನಟಿ ರಾಗಿಣಿ ಆರೆಸ್ಟ್ ಆಗಿದ್ದಾರೆ. ರಾಗಿಣಿ ಬಂಧನ ಚಿತ್ರರಂಗದ ಉಳಿದ ನಟ-ನಟಿಯರಲ್ಲಿ ಡವ-ಡವ ಶುರುವಾಗಿದೆ.
ರಾಗಿಣಿ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ತನಿಖೆಗೆ ತಮ್ಮ ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಲಿದ್ದಾರೆ.
ನಾಳೆ ಕೋರ್ಟ್ ಕಲಾಪ ಇಲ್ಲದ ಕಾರಣ ರಾಗಿಣಿ ಅವರು ಸೋಮವಾರದವರೆಗೆ ಸಿಸಿಬಿ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಮವಾರ ರಾಗಿಣಿ ಪರ ವಕೀಲರು ಜಾಮೀನಿಗಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಬೇಕು. ಜಾಮೀನು ಅರ್ಜಿ ವಿಚಾರಣೆ ನಡೆದು, ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಜಾಮೀನು ಅರ್ಜಿ ತೀರ್ಪು ಪ್ರಕಟಿಸಲಿದೆ. ಅಲ್ಲಿಯವರೆಗೆ ರಾಗಿಣಿಗೆ ಸಿಸಿಬಿ ಕಸ್ಟಡಿಯೋ ಅಥವಾ ಪರಪ್ಪನ ಅಗ್ರಹಾರ ಜೈಲೋ ಎಂಬುದು ತಿಳಿಯಲಿದೆ.
ಪಂಚಮಸಾಲಿ ಪ್ರತಿಭಟನೆ ಗಾಯದ ಮೇಲೆ ‘ಉಪ್ಪು’ ಸವರಿದ CM & ಕಿಚ್ಚು ಹೊತ್ತಿಸಿದ ‘ಪರಂ’..!
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲಿನ ಲಾಠಿಚಾರ್ಜ್ ಸಂಬಂಧ ಸಮುದಾಯದ ಹೋರಾಟದ ಕಿಚ್ಚು ಜ್ವಾಲಾಮುಖಿಯಾಗಿ ಸರ್ಕಾರದ ಅಡಿಪಾಯಕ್ಕೆ ಬಿಸಿಮುಟ್ಟಿಸತೊಡಗಿದೆ ಈ ಬಗ್ಗೆ ಇನ್...