ನಟಿ ಸೋನಲ್ (Sonal) ಹಾಗೂ ನಿರ್ದೇಶಕ ತರುಣ್ ಸುಧೀರ್ (Tharun Sudhir) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈಗಾಗಲೇ ಮದುವೆ ದಿನಾಂಕ ಕೂಡ ಫಿಕ್ಸ್ ಆಗಿದೆ. ಹೀಗಾಗಿ ನಟಿ ಸೋನಲ್ ಶಾಪಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ.
ಅವರು ಬಟ್ಟೆ ಖರೀದಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಗೆ ಜವಳಿ ಖರೀದಿ ಮಾಡುವುದರಲ್ಲಿ ನಟಿ ಈಗ ಬ್ಯೂಸಿಯಾಗಿದ್ದಾರೆ. ಬಟ್ಟೆ ಶಾಪ್‌ವೊಂದರಲ್ಲಿ ಅಮ್ಮನ ಜೊತೆ ಸೋನಲ್ ಸೀರೆ ಖರೀದಿ ಮಾಡುತ್ತಿರುವ ಫೋಟೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಇತ್ತೀಚೆಗಷ್ಟೇ ನವರಂಗ್ ಥಿಯೇಟರ್‌ನಲ್ಲಿ ವಿಡಿಯೋ ಶೂಟ್ ಮಾಡಿ ಅಭಿಮಾನಿಗಳಿಗೆ ಸಖತ್ ಸಿಹಿ ಸುದ್ದಿಯನ್ನು ಸೋನಲ್ ಹಾಗೂ ತರುಣ್ ನೀಡಿದ್ದರು. ಈಗ ಮದುವೆಯಲ್ಲಿ ಬ್ಯೂಸಿಯಾಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಆಗಸ್ಟ್ 10, 11ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಆಗಸ್ಟ್ 10ರಂದು ಸಂಜೆ 6:30 ನಂತರ ಆರತಕ್ಷತೆ ಕಾರ್ಯಕ್ರಮ, ಆ.11ರಂದು ಬೆಳಗ್ಗೆ 10:50 ರಿಂದ 11:35ರ ಶುಭ ಮುಹೂರ್ತದಲ್ಲಿ ತರುಣ್ ಮತ್ತು ಸೋನಲ್ ಮದುವೆ ಸಮಾರಂಭ ನಡೆಯಲಿದೆ.








