Swarnalatha: ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ FIR ದಾಖಲು – ಪೊಲೀಸರಿಂದ ಹುಡುಕಾಟ
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಅವವರಿಗೆ ಬಂಧನದ ಭೀತಿ ಎದುರಾಗಿದೆ. ಮಾರಕಾಸ್ತ್ರಗಳೊಂದಿಗೆ ಅಲಯನ್ಸ್ ವಿವಿಗೆ ನುಗ್ಗಿದ್ದ ಹಿನ್ನೆಲೆಯಲ್ಲಿ ಸ್ವರ್ಣಲತಾ ಅವರ ವಿರುದ್ಧ FIR ದಾಖಲಾಗಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಅಲಯನ್ಸ್ ವಿವಿ ಒಡೆತನಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ವಿವಿಯನ್ನ ಖ್ಯಾತ ರಾಜಕಾರಣಿಯೊಬ್ಬರಿಗೆ ಮಾರಲು ಮುಂದಾಗಿದ್ದಾರೆ ಎಂಬ ಆರೋಪವಿದೆ. ‘ಕೋರ್ಟ್ ಆದೇಶವಿದೆ, ಕಾಲೇಜು ನಮ್ಮದು ಅಂತ’ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ಅವರು ಕಾಲೇಜಿಗೆ ಅಕ್ರಮವಾಗಿ ನುಗ್ಗಿದ್ದಾರೆ ಎಂದು ಎಫ್ಐಆರ್ (FIR) ಆಗಿದೆ.
ವಿವಿಯಿಂದ ಹೊರದಬ್ಬಲ್ಪಟ್ಟಿರುವ ಮಾಜಿ ಮಧುಕರ್ ಅಂಗೂರ್ ಅವರು ರಾಜಕಾರಣಿಯೊಬ್ಬರಿಗೆ ವಿವಿ ಮಾರಲು ನೂರಾರು ಕೋಟಿ ಡೀಲ್ ಕುದುರಿಸಿದ ಆರೋಪವಿದೆ.
ಬಂದೂಕಿನಿಂದ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದಾರೆ. ವಿವಿ ಒಡೆತನಕ್ಕೆ ಸಂಬಂಧಿಸಿದಂತೆ ಕಲಹ ಮುಂದುವರಿದಿದೆ.
ಖ್ಯಾತ ಗೈನಕಾಲಜಿಸ್ಟ್ ಆಗಿರುವ ಸ್ವರ್ಣಲತಾ ಅವರು FIR ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದು ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.







