Adeno virus : ಮಕ್ಕಳಲ್ಲಿ ಹೆಚ್ಚುತ್ತಿದೆ ಅಡೆನೊವೈರಸ್ ಜ್ವರ…. ಏನಿದು ಅಡೆನೊವೈರಸ್ ??
ಅವಧಿಗೆ ಮುನ್ನವೇ ಬಂದಿರುವ ಬೇಸಿಗೆ ಚಿಕ್ಕ ಮಕ್ಕಳನ್ನ ಬಾಧಿಸುತ್ತಿದೆ. ಇದೀಗ ಭಾರತದ ಹಲವು ರಾಜ್ಯಗಳಲ್ಲಿ ಮಕ್ಕಳಲ್ಲಿ ಜ್ವರ ತರಹದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅನೇಕರು ಇದನ್ನ ಸಾಂಕ್ರಾಮಿಕ ಕಾಯಿಲೆಯ ಪರಿಸ್ಥಿಗೆ ಹೋಲಿಸುತ್ತಿದ್ದಾರೆ.
ಕೋಲ್ಕತ್ತಾ, ಮುಂಬೈನ ಆಸ್ಪತ್ರೆಗಳಲ್ಲಿ ಅಡಿನೋ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕರ್ನಾಟಕದಲ್ಲೂ ಕೆಲವು ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ 69 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 13 ಕೇಸ್ ದಾಖಲಾಗಿದೆ. ಅಡಿನೋ ವೈರಸ್ ಎನ್ನುವುದು ಜ್ವರದ ರೀತಿ ಕಾಯಿಲೆಯಾಗಿದೆ. ವೈರಸ್ ದೇಹ ಸೇರಿದ 4-6 ವಾರಗಳ ನಂತರ ಉಸಿರಾಟದ ಮತ್ತು ಕೆಮ್ಮಿನ ಗುಣ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಅಡೆನೊವೈರಸ್ ಎಂದರೇನು?
ಅಡೆನೊವೈರಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಹರಡುತ್ತದೆ. ಇದು ಕರೋನವೈರಸ್ ಅನ್ನು ಹೋಲುತ್ತದೆ ಮತ್ತು ಗಾಳಿಯ ಮೂಲಕ, ಕೆಮ್ಮುವಿಕೆ ಅಥವಾ ಸೀನುವಿಕೆಯ ಮೂಲಕ ಹರಡಬಹುದು. ವೈರಸ್ ಮೇಲ್ಮೈಯಲ್ಲಿ ಇದ್ದಾಗ ಯಾರಾದರೂ ಅದನ್ನು ಸ್ಪರ್ಶಿಸಿದರೆ, ಆ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದು. ಇದರ ರೋಗಲಕ್ಷಣಗಳು ಸಹ COVID ಗೆ ಹೋಲುತ್ತವೆ.
ಅಡೆನೊವೈರಸ್ ಲಕ್ಷಣಗಳು
ಅಡೆನೊವೈರಸ್ ಶೀತ ಅಥವಾ ಜ್ವರ ತರಹದ ಲಕ್ಷಣಗಳನ್ನ ಹೊಂದಿದೆ. ಕೆಲವು ರೋಗಿಗಳು ನ್ಯುಮೋನಿಯಾ, ಕಣ್ಣುಗಳ ಕೆಂಪು, ಅತಿಸಾರ, ವಾಂತಿ ಮತ್ತು ಹೊಟ್ಟೆ ನೋವಿನಂತಹ ರೋಗಲಕ್ಷಣಗಳನ್ನೂ ಹೊಂದಿದ್ದಾರೆ. ಮೂತ್ರಕೋಶದ ಸೋಂಕಿನ ಅಪಾಯವೂ ಇದೆ ಎನ್ನುತ್ತಾರೆ ತಜ್ಞರು.
Adeno virus is increasing in children..! Adeno virus is increasing in children..!