ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ದೇಶಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ದೇಶದ ಅತಿದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಈಗ ತೆರೆಗೆ ಬರಲು ಸಜ್ಜಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಆದಿಪುರುಷ್ ಬಿಡುಗಡೆ ಆಗಲಿದ್ದು, ಭಾರತ (India) ಮಾತ್ರ ಅಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ತೆರೆಗೆ ಅಪ್ಪಳಿಸಲಿದೆ. ಜೂನ್ 16ರಂದು ಈ ಚಿತ್ರ ತೆರೆಗೆ ಅಪ್ಪಳಿಸಲಿದೆ.
ಆದಿಪುರುಷ್ ಸಿನಿಮಾ ಮೊದಲ ದಿನವೇ ಸುಮಾರು 6200 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದೆ ಎನ್ನಲಾಗುತ್ತಿದೆ. ಇದು ಕೂಡ ದಾಖಲೆಯೇ ಸರಿ ಎನ್ನುತ್ತಿದೆ ಚಿತ್ರರಂಗ. ದೇಶ ಅಷ್ಟೇ ಅಲ್ಲದೇ, ವಿದೇಶಿ ಚಿತ್ರ ಮಂದಿರ ಸೇರಿದಂತೆ 6,200ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ.
ಈ ಮೊದಲು ಕೆಜಿಎಫ್ 2 ಸಿನಿಮಾ ಭಾರತದಲ್ಲಿ ಸುಮಾರು 6000 ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗಿತ್ತು. ವಿಶ್ವದಾದ್ಯಂತ ಸುಮಾರು 11,000 ಸ್ಕ್ರೀನ್ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಹಿಂದಿ ಆವೃತ್ತಿಯೊಂದೇ ಉತ್ತರ ಭಾರತದ ರಾಜ್ಯಗಳಲ್ಲಿ 4 ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಲಿದೆ.
ಆದಿಪುರುಷ್ ಸಿನಿಮಾವು ರಾಮಾಯಣದ ಕತೆ ಆಧರಿಸಿದ ಸಿನಿಮಾ ಆಗಿದ್ದು, ಓಂ ರಾವತ್ ನಿರ್ದೇಶನ ಮಾಡಿರುವ ಸಿನಿಮಾಕ್ಕೆ ಭೂಷಣ್ ಕುಮಾರ್ ಹಾಗೂ ಪ್ರಭಾಸ್ ಒಡೆತನದ ಯುವ ಕ್ರಿಯೇಶನ್ಸ್ ಬಂಡವಾಳ ಹಾಕಿದೆ. .ಪ್ರಭಾಸ್ ರಾಮನ ಪಾತ್ರದಲ್ಲಿ ಕೃತಿ ಸೆನನ್ ಸೀತಾ ಮಾತೆಯ ಪಾತ್ರದಲ್ಲ ಕಾಣಿಸಿಕೊಂಡಿದ್ದಾರೆ. ಹನುಮಂತನ ಪಾತ್ರದಲ್ಲಿ ದೇವದತ್ ನಾಗರೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ.