ಚಿಕನ್, ಮೊಟ್ಟೆಯ ಬಳಿಕ ಗಗನಕ್ಕೇರಿದ ಸಕ್ಕರೆ ಬೆಲೆ – ಬಿಕ್ಕಟ್ಟಿನ ಸಮಯದಲ್ಲೂ ಹಣ ಲೂಟಿ ಹೊಡೆಯುತ್ತಿರುವ ಸಚಿವರು !
ಇಸ್ಲಾಮಾಬಾದ್, ಮಾರ್ಚ್15: ಚಿನ್ನದ ಬೆಲೆ ಲಕ್ಷ ರೂಪಾಯಿ, ಚಿಕನ್ ಕೆಜಿಗೆ 500 ರೂಪಾಯಿ, ಒಂದು ಮೊಟ್ಟೆಯ ಬೆಲೆ 30 ರೂಪಾಯಿ… ಮತ್ತು ಈಗ ಸಕ್ಕರೆಯ ಬೆಲೆಯಲ್ಲೂ ಭಾರಿ ಏರಿಕೆ. ಈ ಪರಿಸ್ಥಿತಿ ಇರುವುದು ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿ.
ಭಯೋತ್ಪಾದಕರ ಆಶ್ರಯ ತಾಣ ಪಾಕಿಸ್ತಾನದಲ್ಲಿ ಹಣದುಬ್ಬರವು ಪ್ರತಿದಿನ ಹೊಸ ಹೊಸ ದಾಖಲೆಗಳನ್ನು ಮುರಿಯುತ್ತಿದೆ. ಇನ್ನು ಜನರ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಈಗ ನಾಗರಿಕರು ಸಕ್ಕರೆಯನ್ನು ಸವಿಯಲು ಕಷ್ಟಪಡುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ 10 ಕ್ಕೂ ಹೆಚ್ಚು ನಗರಗಳಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ 100 ರೂ ಯಾಗಿದೆ.
ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಪಿಬಿಎಸ್) ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 10 ಕ್ಕೂ ಹೆಚ್ಚು ನಗರಗಳಲ್ಲಿ ಸಕ್ಕರೆಯ ಬೆಲೆ ಪ್ರತಿ ಕೆಜಿಗೆ 100 ರೂ ಆಗಿದೆ.
ಈ ಅಂಕಿಅಂಶಗಳ ಪ್ರಕಾರ, ಕರಾಚಿಯಲ್ಲಿ ಸಕ್ಕರೆ ಬೆಲೆ ಹೆಚ್ಚು. ಸಕ್ಕರೆಯನ್ನು ಇಲ್ಲಿ ಪ್ರತಿ ಕೆ.ಜಿ.ಗೆ 110 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಸಕ್ಕರೆಯನ್ನು ಇಸ್ಲಾಮಾಬಾದ್ನಲ್ಲಿ ಪ್ರತಿ ಕೆ.ಜಿ.ಗೆ 105 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪಿಬಿಎಸ್ ಪ್ರಕಾರ, ಆರು ನಗರಗಳಲ್ಲಿ ಸಕ್ಕರೆಯ ಬೆಲೆ ಪ್ರತಿ ಕೆಜಿಗೆ 100 ರೂ ಆಗಿದೆ.
ಕಳೆದ ವರ್ಷ ತನಿಖಾ ವರದಿಯಲ್ಲಿ, ಇಮ್ರಾನ್ ಖಾನ್ ಸರ್ಕಾರದ ಮಂತ್ರಿಗಳು ಸಕ್ಕರೆಯ ದುಬಾರಿ ಬೆಲೆಯಿಂದ ಸಾಕಷ್ಟು ಹಣವನ್ನು ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ಪ್ರಧಾನಿ ಇಮ್ರಾನ್ ಖಾನ್ ಅವರು ಸಕ್ಕರೆ ಕೊರತೆಗೆ ಸಂಬಂಧಿಸಿದಂತೆ ತನಿಖೆಯನ್ನು ಫೆಡರಲ್ ಏಜೆನ್ಸಿಗೆ (ಎಫ್ಐಎ) ಹಸ್ತಾಂತರಿಸಿದರು. ಏಜೆನ್ಸಿ ಬಿಡುಗಡೆ ಮಾಡಿದ ವರದಿಯಲ್ಲಿ, ಆಡಳಿತ ಪಕ್ಷದ ಪಿಟಿಐನ ಅನೇಕ ಸದಸ್ಯರು ದೇಶದ ಈ ಬಿಕ್ಕಟ್ಟಿನಿಂದ ಹಣ ಸಂಪಾದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತನಿಖಾ ವರದಿಯಲ್ಲಿ ಜೆಹಂಗೀರ್ ತರಣ್ ಮತ್ತು ಅಂದಿನ ಆಹಾರ ಸುರಕ್ಷತಾ ಸಚಿವ ಖುಸ್ರೊ ಬಕ್ತಿಯಾರ್ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಮೂನೀಸ್ ಎಲಾಹಿ ಎಂಬ ಕಂಪನಿಯು ಸಹ ಈ ಸಮಯದಲ್ಲಿ ಲಾಭ ಪಡೆದಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಎಲಾಹಿ ಚೌಧರಿ ಪಿಎಂಎಲ್-ಕ್ಯೂ ಪಕ್ಷದ ಪ್ರಮುಖ ಸದಸ್ಯರಾಗಿರುವ ಪರ್ವೇಜ್ ಎಲಾಹಿ ಅವರ ಪುತ್ರ.
ಡ್ರೈ ಫ್ರೂಟ್ಸ್ ಗಳ ಆರೋಗ್ಯ ಪ್ರಯೋಜನಗಳು https://t.co/ZXfXmbT1l4
— Saaksha TV (@SaakshaTv) March 10, 2021
ಗೋಧಿ ಹಿಟ್ಟಿನ ಲಡ್ಡು https://t.co/b8z5zaAPhL
— Saaksha TV (@SaakshaTv) March 10, 2021
ಇಸ್ಲಾಂ ಧರ್ಮ ನಂಬದ ಕಾರಣ ಮದರ್ ತೆರೇಸಾ ನರಕಕ್ಕೆ ಹೋಗುತ್ತಾರೆ – ಝಾಕೀರ್ ನಾಯ್ಕ್ ವಿವಾದಾತ್ಮಕ ಹೇಳಿಕೆ https://t.co/GnEaUN5smc
— Saaksha TV (@SaakshaTv) March 10, 2021