Agniveer Recruitment 2022 – ಭೂ ಸೇನೆಯಿಂದ ಅಗ್ನಿವೀರ್ ನೇಮಕಾತಿಗೆ ಅಧಿಸೂಚನೆ ಪ್ರಕಟ
ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ಗಳ ನೇಮಕಾತಿಗಾಗಿ ಮೊದಲ ಅಧಿಸೂಚನೆಯನ್ನ ಸೋಮವಾರ ಬಿಡುಗಡೆ ಮಾಡಿದೆ. ನೋಂದಣಿ ಪ್ರಕ್ರಿಯೆಯು ಈ ವರ್ಷ ಜುಲೈನಲ್ಲಿ ಪ್ರಾರಂಭವಾಗಲಿದೆ.
ಅಗ್ನಿಪಥ್ ಯೋಜನೆಯನ್ನ ವಿರೋಧಿಸಿ ವಿಪಕ್ಷಗಳು ಮತ್ತು ದೇಶದ ಹಲವು ಭಾಗಗಳಲ್ಲಿ ಯುವಕರ ಪ್ರತಿಭಟನೆಯ ನಡುವೆ ಭಾರತೀಯ ಸೇನೆ ಮೊದಲ ನೇಮಕಾತಿ ಅಧಿಸೂಚನೆಯನ್ನ ಪ್ರಕಟಿಸಿದೆ. ಯೂನಿಯನ್ ಕ್ಯಾಬಿನೆಟ್ ಹೊಸ ಯೋಜನೆ ಅನುಮತಿಸಿದ ಒಂದು ವಾರದೊಳಗೆ ಬಂದಿರುವ ನೇಮಕಾತಿ ರ್ಯಾಲಿ ಅಧಿಸೂಚನೆ ಇದಾಗಿದೆ.
ಅಗ್ನಿವೀರ್ ಶ್ರೇಣಿಯು ಭಾರತೀಯ ಸೇನೆಯಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಶ್ರೇಣಿಗಿಂತ ವಿಭಿನ್ನವಾದ ಶ್ರೇಣಿಯನ್ನು ರೂಪಿಸುತ್ತದೆ ಎಂದು ಸೇನೆ ಹೇಳಿದೆ. ಭಾರತೀಯ ಸೇನೆ ಬಿಡುಗಡೆಗೊಳಿಸಿದ ಅಧಿಸೂಚನೆಯ ಪ್ರಕಾರ
“ಅಗ್ನಿವೀರ್ ಸಾಮಾನ್ಯ ಕರ್ತವ್ಯ,
ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ಮದ್ದುಗುಂಡುಗಳು, ಪರೀಕ್ಷಕರು),
ಅಗ್ನಿವೀರ್ ಕ್ಲರ್ಕ್/ಸ್ಟೋರ್ಕೀಪರ್,
ಅಗ್ನಿವೀರ್ ಟ್ರೇಡ್ಸ್ಮ್ಯಾನ್ ಗಾಗಿ ನೇಮಕಾತಿಯನ್ನ ಕರೆಯಲಾಗಿದೆ.
ಜುಲೈ 2022 ರಿಂದ ನೋಂದಣಿ ಪ್ರಾರಂಭವಾಗಲಿದ್ದು ಅಭ್ಯರ್ಥಿಗಳಿಗೆ ಆನ್ಲೈನ್ ನೋಂದಣಿ ಕಡ್ಡಾಯವಾಗಿರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ ಇತರ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಮುಂದುವರಿಸಲು ಅನುವು ಮಾಡಿಕೊಡಲು ಅಗ್ನಿವೀರ್ಗಳಿಗೆ ‘ಸೇವಾ ನಿಧಿ’ ಪ್ಯಾಕೇಜ್ ಅನ್ನು ನೀಡಲಾಗುತ್ತದೆ.
ಆಸಕ್ತರು ಭೂಸೇನೆ ಅಗ್ನಿವೀರರ ಹುದ್ದೆಗಳಿಗೆ ವೆಬ್ಸೈಟ್ JOININIDANARMY.NIC.IN ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ…