ಕೃಷಿ ಕಾಯ್ದೆ ವಾಪಸ್ : ಟ್ಟಿಟ್ಟರ್ ನಲ್ಲಿ ಸಿದ್ದರಾಯ್ಯ- ಬಿಜಿಪಿ ಟ್ವೀಟ್ ವಾರ್ Siddaramaiah saaksha tv
ಬೆಂಗಳೂರು : ಪ್ರಧಾನಿಯೊಬ್ಬರ ಸಾವಿಗೆ ಒಂದು ಸಮುದಾಯದ ಮೇಲೆ ಪ್ರತೀಕಾರ ತೆಗೆದುಕೊಳ್ಳುವ ನಿಲುವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳದೇ ಇರುತ್ತಿದ್ದರೆ 3 ಸಾವಿರಕ್ಕೂ ಅಧಿಕ ಸಿಖ್ಖರ ಜೀವ ಉಳಿಸಬಹುದಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದೆ.
ಸಿದ್ದರಾಮಯ್ಯ ಕೃಷಿ ಕಾಯ್ದೆ ವಾಪಸ್ ಪಡೆದ ವಿಚಾರವಾಗಿ ಟ್ವಿಟ್ಟರ್ ನಲ್ಲಿ.. ಕರಾಳ ಕಾಯ್ದೆಗಳನ್ನು ಮೊದಲೇ ಹಿಪಡೆದಿದ್ದರೆ 700 ಅನ್ನದಾತರ ಜೀವ ಉಳಿಸಬಹುದಿತ್ತು.
ಈ ಸಾವುಗಳಿಗೆ ನರೇಂದ್ರ ಮೋದಿಯವರ ಸರ್ಕಾರವೇ ನೇರ ಹೊಣೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತ ಹೋರಾಟಕ್ಕೆ ಯಾವ ಸರ್ಕಾರವಾದರೂ ಮಣಿಯಲೇ ಬೇಕು.
ಜನ ಶಕ್ತಿಯ ಅಂಕುಶದಲ್ಲಿ ರಾಜ್ಯ ಶಕ್ತಿ ಇರಬೇಕಾಗುತ್ತದೆ. ಇದೇ ಪ್ರಜಾಪ್ರಭುತ್ವ ಎಂದು ಬರೆದುಕೊಂಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಬಿಜೆಪಿ ಘಟಕ.. ಪ್ರಧಾನಿಯೊಬ್ಬರ ಸಾವಿಗೆ ಒಂದು ಸಮುದಾಯದ ಮೇಲೆ ಪ್ರತೀಕಾರ ತೆಗೆದುಕೊಳ್ಳುವ ನಿಲುವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳದೇ ಇರುತ್ತಿದ್ದರೆ 3 ಸಾವಿರಕ್ಕೂ ಅಧಿಕ ಸಿಖ್ಖರ ಜೀವ ಉಳಿಸಬಹುದಿತ್ತು.
ಇದಕ್ಕೇನು ಹೇಳುತ್ತೀರಿ ಮಾನ್ಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದೆ.