ತಮಿಳುನಾಡು – ಮತದಾರರ ಮನವೊಲಿಸಲು ಬಟ್ಟೆ ಒಗೆದುಕೊಟ್ಟ ಎಐಎಡಿಎಂಕೆ ಅಭ್ಯರ್ಥಿ

1 min read
AIADMK candidate

ತಮಿಳುನಾಡು – ಮತದಾರರ ಮನವೊಲಿಸಲು ಬಟ್ಟೆ ಒಗೆದುಕೊಟ್ಟ ಎಐಎಡಿಎಂಕೆ ಅಭ್ಯರ್ಥಿ

ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಸೋಮವಾರ ಮಹಿಳೆಯೊಬ್ಬರ ಬಟ್ಟೆಗಳನ್ನು ಸಾರ್ವಜನಿಕವಾಗಿ ತೊಳೆದು ಮತ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ.
AIADMK candidate

ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರವನ್  ಸೋಮವಾರ ನಾಗೋರ್ ಬಳಿ ಮತ ಚಲಾಯಿಸಲು ಹೋದಾಗ ಸಾಕಷ್ಟು ಸಂಚಲನ ಮೂಡಿಸಿದ್ದಾರೆ.
ಅವರು ಮತ್ತು ಇತರ ಪಕ್ಷದ ಕಾರ್ಯಕರ್ತರು ವಂಡಿಪೆಟ್ಟೈನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾಗ, ಒಬ್ಬ ಮಹಿಳೆ ತನ್ನ ಕುಟುಂಬ ಸದಸ್ಯರ ಬಟ್ಟೆ ಒಗೆಯುವುದನ್ನು ತಂಗಾ ಕಾತಿರವನ್ ನೋಡಿದರು. ಕಾತಿರವನ್ ಮಹಿಳೆಯನ್ನು ಸಮೀಪಿಸಿ ಕೆಲವು ಬಟ್ಟೆಗಳನ್ನು ತೊಳೆಯಲು ಮುಂದಾದರು. ಮೊದಲು ಹಿಂಜರಿಕೆ ಮತ್ತು ವಿಚಿತ್ರತೆಯನ್ನು ಅನುಭವಿಸಿದ ಮಹಿಳೆ ನಂತರ ತೊಳೆಯಬೇಕಾದ ಬಟ್ಟೆಗಳನ್ನು ಅವರಿಗೆ ಹಸ್ತಾಂತರಿಸಿದಳು.
AIADMK candidate
ಕಾತಿರವನ್ ಕುಳಿತು ಕೆಲವು ನಿಮಿಷಗಳಲ್ಲಿ ಆ ಬಟ್ಟೆಗಳನ್ನು ಒಗೆದುಕೊಟ್ಟರು.. ಜೊತೆಗೆ  ಪಕ್ಕದಲ್ಲಿಯೇ ಇದ್ದ ಕೆಲವು ಪಾತ್ರೆಗಳನ್ನು ತೊಳೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾತಿರವನ್, ನಾನು ಚುನಾವಣೆಯಲ್ಲಿ ಗೆದ್ದರೆ ಮನೆ ಮನೆಗೆ ವಾಷಿಂಗ್‌‌ ಮೆಷಿನ್‌ ನೀಡುತ್ತೇನೆ. ಈ ವಿಚಾರವನ್ನು ತಿಳಿಸಲು ಬಟ್ಟೆಗಳನ್ನು ತೊಳೆದುಕೊಟ್ಟಿದ್ದೇನೆ. ದಿ.ಸಿಎಂ ಜಯಲಲಿತಾ ಅವರು ಮನೆ ಮನೆಗೆ ವಾಷಿಂಗ್‌ ಮೆಷಿನ್‌‌ ನೀಡುವುದಾಗಿ ಮೊದಲು ಭರವಸೆ ನೀಡಿದ್ದರು ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd