Akal takht express : ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ TC
ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಗೊತ್ತೇ ಇದೆ. ಬಸ್ಸಿನಲ್ಲಿಯೂ ಇಂಥದ್ದೇ ಘಟನೆ ನಡೆದಿತ್ತು. ಇದೀಗ ರೈಲಿನಲ್ಲಿಯೂ ಇಂಥದ್ದೇ ಪ್ರಮಾದವೊಂದು ವರದಿಯಾಗಿದೆ. ಭಾನುವಾರ (ಮಾರ್ಚ್ 12, 2023) ಮಧ್ಯರಾತ್ರಿ ಅಕಲ್ ತಖ್ತತ್ ಎಕ್ಸ್ಪ್ರೆಸ್ ರೈಲಿನ ಎ1 ಕೋಚ್ನಲ್ಲಿ ರೈಲಿನಲ್ಲಿ ಮಹಿಳೆ ಮೇಲೆ ಕುಡಿದ ಅಮಲಿನಲ್ಲಿ ಟಿ ಸಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಮೃತಸರ-ಕೋಲ್ಕತ್ತಾ ಅಕಲ್ ತಖ್ತತ್ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿವಾಹಿತ ಮಹಿಳೆಯ ತಲೆಯ ಮೇಲೆ ಕುಡಿದ ಅಮಲಿನಲ್ಲಿ ಟಿಸಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಮೃತಸರ ಮೂಲದ ಮಹಿಳೆ ತನ್ನ ಪತಿ ರಾಜೇಶ್ ಕುಮಾರ್ ಜೊತೆ ಅಮೃತಸರದಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸೋಮವಾರ ರೈಲು ಲಕ್ನೋದ ಚಾರ್ಬಾಗ್ ರೈಲು ನಿಲ್ದಾಣವನ್ನು ತಲುಪಿದ ತಕ್ಷಣ, ಸಂತ್ರಸ್ತೆ ತನ್ನ ಪತಿಯೊಂದಿಗೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿ ಮುನ್ನಾಕುಮಾರ್ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಟಿಸಿ ಮಾಡಿದ ಈ ಕೃತ್ಯಕ್ಕೆ ಮಹಿಳೆ ಜೋರಾಗಿ ಕಿರುಚಿದ್ದಾಳೆ. ಇದರೊಂದಿಗೆ ಆಕೆಯ ಪತಿ ಹಾಗೂ ಸಹ ಪ್ರಯಾಣಿಕರು ನಿದ್ದೆಯಿಂದ ಎದ್ದು, ಏನಾಯಿತು ಎಂದು ತಿಳಿದಾಗ ಎಲ್ಲ ಪ್ರಯಾಣಿಕರು ಟಿಸಿಯನ್ನ ಹಿಡಿದು ಚಾರ್ಭಾಗ್ ರೈಲು ನಿಲ್ದಾಣದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಸಿಯನ್ನು ಬಿಹಾರ ಮೂಲದ ಮುನ್ನಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಮುನ್ನಾ ಕುಮಾರ್ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Akal takht express: TC urinated on woman while drunk