‘ಅಖಂಡ 2 ‘ ಬಗ್ಗೆ ಸಿಕ್ಕ ಸುಳಿವು : ನಿರ್ದೇಶಕರು ಹೇಳಿದ್ದೇನು..??
ತೆಲುಗಿನ ಫಿಯರ್ ಲೆಸ್ ,,, ಡೇರಿಂಗ್ ನಟನಾಗಿಯೇ ,,, ಒಂದು ಫೈಯರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ನಟ ನಂದಮುರಿ ಬಾಲಕೃಷ್ಣ.. ಬಾಲಕೃಷ್ಣರಿಗೆ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ.. ಅವರ ಸಿನಿಮಾ ಬರ್ತಿದೆ ಅಂದ್ರೆ ಅಭಮಾನಿಗಳಲ್ಲಿ ಥ್ರಿಲ್ , ಕುತೂಹಲ , ಡೈಲಾಗ್ಸ್ ಗಳಿಗಾಗಿ ಹಪಾಹಪಿ ಇರುತ್ತೆ..
ಅವರ ಸಿನಿಮಾಗಳಲ್ಲಿ ಅವರು ಕೂಡ ಅಭಿಮಾನಿಗಳ ಫೇವರೇಟ್ ಎಲಿಮೆಂಟ್ಸ್ ನೀಡೋದ್ರಲ್ಲಿ ಮೋಸ ಮಾಡಲ್ಲ,, ಡೈಲಾಗ್ಸ್ ಮಸ್ತ ಇರುತ್ತೆ.. ಮಾಸ್ ಸೀನ್ಸ್ ಅಷ್ಟೇ ಇರುತ್ತೆ.. ಅಂತೆಯೇ ಇತ್ತೀಚೆಗೆ ರಿಲೀಸ್ ಆದ ಅವರ ‘ ಅಖಂಡ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು ಸೂಪರ್ ಹಿಟ್ ಆಗಿದೆ..
ಸಿನಿಮಾ ತಂಡವು ಥ್ಯಾಂಕ್ ತಯೂ ಮೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದವನ್ನೂ ಅರ್ಪಿಸಿದೆ.. ಆದ್ರೆ ಟಾಲಿವುಡ್ ಅಂಗಳಲ್ಲಿ ಸದ್ಯ ಈಗ ಸಂಚಲನ ಸೃಷ್ಟಿಸಿರುವ ಕಬರ್ ಅಂದ್ರೆ ,, ಬೊಯಪಾಟು ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್ ನ ಅಖಂಡ ಸಿನಿಮಾದ ಪಾರ್ಟ್ 2 ಬರಲಿದೆ ಎನ್ನುವುದು..
ಹೌದು ಬಾಲಕೃಷ್ಣಗೆ ಎಷ್ಟೇ ದೊಟ್ಟ ಮಟ್ಟದಲ್ಲಿ ಫ್ಯಾನ್ಸ್ ಇದ್ರು ಕೆಲ ವರ್ಷಗಳಿಂದ ಅವರ ಸಿನಿಮಾಗಳು ಅಷ್ಟು ಸೌಂಡ್ ಮಾಡ್ತಿರಲಿಲ್ಲ.. ಆದ್ರೆ ಅಖಂಡ ಸೂಪರ್ ಹಿಟ್ ಆಗಿದ್ದು ಬಾಲಕೃಷ್ಣ ಅವರ ಮೋಸ್ಟ್ ಸಕ್ಸಸ್ ಫುಲ್ ಸಿನಿಮಾವೆಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ..
ಈ ನಡುವೆ ಅಖಂಡ 2 ಸಿನಿಮಾಗೆ ತಯಾರಿಗಳು ನಡೆಯುತ್ತಿವೆ ಎನ್ನಲಾಗ್ತಿದೆ.. ಈ ಬಗ್ಗೆ ಶೀಘ್ರವೇ ಅಪ್ ಡೇಟ್ಸ್ ಸಿಗುವ ನಿರೀಕ್ಷೆಯೂ ಇದೆ.. ಇದಕ್ಕೆ ಕಾರಣವೂ ಇದೆ.. ಸಂದರ್ಶನವೊಂದ್ರಲ್ಲಿ ಶ್ರೀನು ಅವರೇ ಅಖಂಡ 2 ಬರುವ ಸಾಧ್ಯತೆಗಳನ್ನೂ ಅಲ್ಲೆಗಳೆಯುವಂತಿಲ್ಲ ಎಂದಿದ್ದರು.. ಹೀಗಾಗಿ ಅಖಂಡ 2 ಬರುವುದು ಪಕ್ಕಾ ಎಂದೇ ಹೇಳಲಾಗ್ತಿದೆ..
ಅಂದ್ಹಾಗೆ ಈ ಸಿನಿಮಾ ಈವರೆಗೂ ಒಟ್ಟಾರೆ 125 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಕರ್ನಾಟಕದಲ್ಲಿಯೇ ಸುಮಾರು 12 ಕೋಟಿ ಕಲೆಕ್ಷನ್ ಮಾಡಿದೆ..