ಬೆಂಗಳೂರು: ನಾಯಿ ಮಾಂಸ (Dog Meat) ಮಾರಾಟ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSL) ದ ವರದಿ ಸರ್ಕಾರದ ಕೈ ಸೇರಿದೆ.
ವರದಿಯು ಈಗಾಗಲೇ ಆಯುಕ್ತ ಕೆ ಶ್ರೀನಿವಾಸ್, ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಕೈ ಸೇರಿದೆ. ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಬರುತ್ತಿದ್ದದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಆಹಾರ ಮತ್ತು ಗುಣಮಟ್ಟ ಆಯುಕ್ತಾಲಯ ವರದಿ ನೀಡಿದೆ. ಹೀಗಾಗಿ ಭಾರೀ ಹೈಡ್ರಾಮಾ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮಾಂಸದ ಸ್ಯಾಂಪಲ್ ನ್ನು ಹೈದ್ರಾಬಾದ್ ಐಸಿಎಆರ್ ಗೆ ಕಳುಹಿಸಿತ್ತು. ಸದ್ಯ ರಿಪೋರ್ಟ್ ಗುಣಮಟ್ಟ ಇಲಾಖೆ ಈ ವರದಿ ನೀಡಿದ್ದು, ರಿಪೋರ್ಟ್‌ಲ್ಲಿ ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ವರದಿಯಾಗಿದೆ.
ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಮಾತನಾಡಿ, ಕುರಿ ಮಾಂಸ ಎಂದು ವರದಿ ಬಂದಿದೆ. ಆರಂಭದಲ್ಲಿ 9 ಜನರಿಗೆ ಲೈಸೆನ್ಸ್ ನೀಡಲಾಗಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸೆನ್ಸ್ ಇದೆ. ಹೀಗಾಗಿ ರಾಜಸ್ಥಾನದಿಂದ ಕುರಿ ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂಬುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ, ನಾಯಿ ಮಾಂಸ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾವು ಪೊಲೀಸರಿಗೆ ವರದಿ ನೀಡುತ್ತೇವೆ. ವದಂತಿ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಕೂಡ ಅಧಿಕಾರಿಗಳು ಹೇಳಿದ್ದಾರೆ.








