ADVERTISEMENT
Friday, December 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಧರ್ಮಸ್ಥಳದಲ್ಲಿ ಸತ್ತಿದ್ದು ಹಿಂದೂ ಹೆಣ್ಣುಮಕ್ಕಳೇ, ನ್ಯಾಯ ಕೇಳಿದರೆ ನಾನು ಎಡಪಂಥೀಯಳೇ? ಮಾಧ್ಯಮಗಳಿಗೆ ನಾಗಲಕ್ಷ್ಮಿ ಚೌಧರಿ ಖಡಕ್ ತಿರುಗೇಟು

Am I a leftist if I ask for justice? Nagalakshmi Chaudhary's sharp retort to the media

Shwetha by Shwetha
November 12, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ಧರ್ಮಸ್ಥಳದ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ಆಗ್ರಹಿಸಿದ್ದಕ್ಕೆ ನನ್ನನ್ನು ಎಡಪಂಥೀಯಳು ಎಂದು ಜರಿಯಲಾಗುತ್ತಿದೆ. ಅಲ್ಲಿ ಅನ್ಯಾಯವಾಗಿ ಪ್ರಾಣ ಬಿಟ್ಟವರು ಹಿಂದೂ ಹೆಣ್ಣುಮಕ್ಕಳೇ ಎಂಬುದು ನೆನಪಿರಲಿ. ಹೆಣ್ಣಿಗೆ ನ್ಯಾಯ ಕೇಳುವುದು ತಪ್ಪೇ? ನನ್ನ ಜಾತಿ, ಮತ, ಪಂಥ ಎಲ್ಲವೂ ಹೆಣ್ಣು ಮಾತ್ರ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ತಮ್ಮನ್ನು ಟೀಕಿಸಿದ ಮಾಧ್ಯಮಗಳು ಮತ್ತು ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ಸರಣಿ ಕೊಲೆ ಮತ್ತು ಅತ್ಯಾಚಾರಗಳು ನಡೆದಿವೆ ಎಂದು ಆರೋಪಿಸಿ ಚಿನ್ನಯ್ಯ ಎಂಬುವವರು ನೀಡಿದ ದೂರಿನ ಅನ್ವಯ, ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು. ಈ ತನಿಖೆ ಅಂತಿಮ ಹಂತ ತಲುಪಿ, ನವೆಂಬರ್ ಮೊದಲ ವಾರದಲ್ಲಿ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇತ್ತು. ಆದರೆ, ಅನಿರೀಕ್ಷಿತವಾಗಿ ಹೈಕೋರ್ಟ್ ಈ ತನಿಖೆಗೆ ತಡೆಯಾಜ್ಞೆ ನೀಡಿತ್ತು.

Related posts

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

December 11, 2025
 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

December 11, 2025

ಹೈಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಕೇವಲ ಚಿನ್ನಯ್ಯ ಅವರ ಹೇಳಿಕೆಯನ್ನಷ್ಟೇ ಆಧರಿಸದೆ, ಪ್ರಕರಣದ ಕುರಿತು ಸಮಗ್ರ ಮತ್ತು ವಿಸ್ತೃತ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಸಂತ್ರಸ್ತ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕಾದರೆ ತನಿಖೆಯ ವ್ಯಾಪ್ತಿ ಹೆಚ್ಚಾಗಬೇಕು ಎನ್ನುವುದು ಅವರ ಕಾಳಜಿಯಾಗಿತ್ತು.

ಆದರೆ, ನಾಗಲಕ್ಷ್ಮಿ ಅವರ ಈ ನಡೆಯನ್ನು ಕೆಲವು ಮಾಧ್ಯಮಗಳು ತೀವ್ರವಾಗಿ ಖಂಡಿಸಿದ್ದವು. ತನಿಖೆ ನಡೆಯಬಾರದು ಎಂಬಂತೆ ಬಿಂಬಿಸಿ, ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳ ಪರ ದನಿ ಎತ್ತಿದ್ದನ್ನೇ ಪ್ರಶ್ನಿಸಿ ವರದಿಗಳನ್ನು ಪ್ರಕಟಿಸಿದ್ದವು.

ಟೀಕಾಕಾರರ ಬಾಯಿ ಮುಚ್ಚಿಸಿದ ನಾಗಲಕ್ಷ್ಮಿ ಚೌಧರಿ

ಈ ಎಲ್ಲಾ ಟೀಕೆಗಳಿಗೆ ಇದೀಗ ಸ್ವತಃ ನಾಗಲಕ್ಷ್ಮಿ ಚೌಧರಿ ಅವರೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಆಡಿದ ಮಾತುಗಳು ಇಲ್ಲಿವೆ:

“ಧರ್ಮಸ್ಥಳದ ಬಗ್ಗೆ ದನಿ ಎತ್ತಿದ್ದಕ್ಕೆ ನನ್ನನ್ನು ಎಡಪಂಥೀಯಳು ಎಂದು ಕರೆಯುತ್ತಿದ್ದಾರೆ. ನಾನೇಕೆ ಎಡಪಂಥೀಯಳಾಗಲಿ? ಒಂದು ಹೆಣ್ಣಿಗೆ ಯಾವುದೇ ಎಡ ಇರಲ್ಲ, ಬಲ ಇರಲ್ಲ. ನೀವು ನನ್ನನ್ನು ಕೇಳಿದರೆ ನನ್ನ ಜಾತಿ, ಮತ ಹಾಗೂ ಧರ್ಮ ಎಲ್ಲವೂ ಹೆಣ್ಣೇ ಎಂದು ಹೇಳುತ್ತೇನೆ. ಅಲ್ಲಿ ಸತ್ತವರು ಯಾರು? ಹಿಂದೂ ಹೆಣ್ಣುಮಕ್ಕಳೇ. ಅವರ ಪರ ನಾನು ದನಿ ಎತ್ತಬಾರದಾ? ಹಾಗೆ ದನಿ ಎತ್ತಿದ ಕೂಡಲೇ ನಾನು ಎಡಪಂಥೀಯಳಾಗಿಬಿಡುತ್ತೀನಾ?” ಎಂದು ಪ್ರಶ್ನಿಸಿದ್ದಾರೆ.

“ನಾನು ಎಡಪಂಥೀಯಳೂ ಅಲ್ಲ, ಬಲಪಂಥೀಯಳೂ ಅಲ್ಲ, ನಾನು ಬರೀ ಹೆಣ್ಣು ಅಷ್ಟೇ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾನು ಈ ಕುರ್ಚಿಯಲ್ಲಿ ಇರುವ ತನಕ ಧರ್ಮದ ಪರ, ಆ ಹೆಣ್ಣಿನ ಪರ ನಾನು ಯಾವಾಗಲೂ ನಿಂತುಕೊಳ್ಳುತ್ತೇನೆ. ನನ್ನ ಹುದ್ದೆಗೆ ಯಾವುದೇ ಜಾತಿ, ಮತ, ಧರ್ಮ, ಪಂಥ ಇಲ್ಲ. ಬ್ರಾಹ್ಮಣರ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗುವುದಿಲ್ಲವೇ? ದಲಿತರ ಮಕ್ಕಳ ಮೇಲೆ ಆಗಲ್ವಾ? ದೌರ್ಜನ್ಯ ಆದವರ ಬಳಿ ಹೋಗಿ ನೀವು ಎಡನಾ, ಬಲನಾ ಅಂತ ಕೇಳ್ತಾರಾ? ನನ್ನ ಬಳಿ ಬರುವ ಹೆಣ್ಣುಮಕ್ಕಳನ್ನು ನಾನು ಯಾವ ಪಂಥ ಎಂದು ಕೇಳಲು ಸಾಧ್ಯವೇ? ಹೆಣ್ಣಿಗೆ ಯಾವುದೇ ಪಂಥವಿಲ್ಲ, ಯಾವ ಹೆಣ್ಣಿನ ಮೇಲೆ ಆದರೂ ಅದು ದೌರ್ಜನ್ಯವೇ,” ಎಂದು ಗುಡುಗಿದ್ದಾರೆ.

ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡಿದ ಅವರು, “ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕಾಣೆಯಾದ ಹೆಣ್ಣುಮಕ್ಕಳ ವರದಿಯನ್ನು ತರಿಸಿಕೊಂಡು, ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ,” ಎಂದು ತಮ್ಮ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ತಮ್ಮನ್ನು ಟೀಕಿಸುತ್ತಿರುವವರ ಬಾಯಿ ಮುಚ್ಚಿಸಿ, ಸಂತ್ರಸ್ತೆಯರ ಪರ ತಮ್ಮ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ShareTweetSendShare
Join us on:

Related Posts

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

by admin
December 11, 2025
0

ಚಿನ್ನಸ್ವಾಮಿ ಕ್ರೀಡಾಂಗಣ..ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕ.. ಕರ್ನಾಟಕ ಕ್ರಿಕೆಟಿಗರ ಪ್ರೀತಿಯ ಮೈದಾನ. ಒಂದೇ ಒಂದು ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನÀ...

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

by admin
December 11, 2025
0

ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ.. ಪ್ರತಿಯೊಬ್ಬರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಅಥವಾ ನಿಮಗೆ...

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

by Shwetha
December 11, 2025
0

ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ, ವಿಶೇಷವಾಗಿ RCB ಫ್ಯಾನ್ಸ್‌ಗಳಿಗೆ ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ ಬಂದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿರುವಂತೆ, ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಸೇರಿದಂತೆ ಕ್ರಿಕೆಟ್...

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

by Shwetha
December 11, 2025
0

ರಾಜ್ಯದಲ್ಲಿ ಭೂ ಸಂಬಂಧಿತ ಕಾನೂನುಗಳನ್ನು ಸ್ಮಾರ್ಟ್ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಬಹು ನಿರೀಕ್ಷಿತ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಮಂಡನೆಗೆ ಬರುತ್ತಿದೆ. ರಾಜ್ಯ ರೆವಿನ್ಯೂ...

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

by Shwetha
December 11, 2025
0

ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾ ಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ದುರುದ್ದೇಶದಿಂದ ಹೆಣೆಯಲಾದ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಭಾರಿ ಷಡ್ಯಂತ್ರದ ಮುಖವಾಡ ಕಳಚಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram