ಚಂದನವನದ ‘ಹೆಬ್ಬುಲಿ’ (Hebbuli Film) ನಟಿ ಅಮಲಾ ಪೌಲ್ (Amala Paul) ಇತ್ತೀಚೆಗಷ್ಟೇ ಪ್ರಚಾರ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಅವರು ತೊಟ್ಟ ಬಟ್ಟೆಯ ಬಗ್ಗೆ ಟ್ರೋಲ್ ಆಗಿದ್ದರು. ಸದ್ಯ ಈ ಕುರಿತು ಮಾತನಾಡಿದ್ದಾರೆ.
ಸಮಸ್ಯೆ ಇರುವುದು ಬಟ್ಟೆಯಲ್ಲಲ್ಲ, ಕ್ಯಾಮೆರಾಮ್ಯಾನ್ ಗಳಲ್ಲಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ನನಗೆ ಯಾವ ಬಟ್ಟೆ ಆರಾಮ ಎನಿಸುತ್ತದೆಯೋ ಅದನ್ನು ಮಾತ್ರ ಧರಿಸುವೆ. ಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ಅದನ್ನು ನಿಯಂತ್ರಿಸುವುದು ನನ್ನ ಕೈಯಲ್ಲಿ ಇಲ್ಲ. ನಾನು ಎಲ್ಲ ರೀತಿಯ ಡ್ರೆಸ್‌ನ ಹಾಕುತ್ತೇನೆ ಎಂದು ಅಮಲಾ ಪೌಲ್ ಮಾತನಾಡಿದ್ದಾರೆ.
ನನ್ನ ಬಟ್ಟೆಯಿಂದಾಗಿ ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಿಲ್ಲ. ನಾನು ಸಾಂಪ್ರದಾಯಿಕ ಸೇರಿದಂತೆ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತೇನೆ. ಆ ಉಡುಪನ್ನು ಧರಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಅವರ ಡ್ರೆಸ್ಸಿಂಗ್ ಆಯ್ಕೆಗಳ ಬಗ್ಗೆ ವಿಶ್ವಾಸವನ್ನು ತುಂಬಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಅವರು ಕಾಲೇಜಿಗೆ ಪ್ರಚಾರಕ್ಕೆಂದು ತೆರಳಿದ್ದರು.








