ಮೂಳೆಗಳ ಆರೋಗ್ಯದಿಂದ ಜೀರ್ಣಕ್ರಿಯೆಯ ವರೆಗೂ ಸಪೋಟ(chikoo) ಅಧ್ಭುತ ಪ್ರಯೋಜನಗಳು….
ಚಿಕೂ ಅಥವಾ ಸಪೋಟ ಎಲ್ಲರೂ ಇಷ್ಟಪಡುವಂತಹ ಹಣ್ಣುಗಳಲ್ಲಿ ಇದು ಒಂದು. ಅದರಲ್ಲೂ ವಿಶೇಷವಾಗಿ ಸಿಹಿ ರುಚಿ ಮತ್ತು ಅದ್ಭುತ ಪರಿಮಳವನ್ನು ಆನಂದಿಸುವ ಮಕ್ಕಳಿಗೆ ಇದು ಅಚ್ಚುಮೆಚ್ಚು. ಸಪೋಟಾ ಎಂದೂ ಕರೆಯಲ್ಪಡುವ ಚಿಕೂ ಪೋಷಕಾಂಶಗಳ ಉಗ್ರಾಣವಿದ್ದಂತೆ, ಇದರಲ್ಲಿ ನಾರಿನಂಶ ಅಧಿಕವಾಗಿದೆ,
ಕ್ಯಾಲ್ಸಿಯಂ ಮತ್ತು ಅಧಿಕ ನಾರಿನಂಶ ಹೊಂದಿರುವ ಸಪೋಟ ಹಲವು ರೋಗಗಳಿಗೆ ರಾಮಬಾಣವೂ ಹೌದು. ಮಲಬದ್ಧತೆ, ಉರಿಯೂತದ ಗುಣಲಕ್ಷಣಗಳು, ಊತ ಮತ್ತು ಕೀಲು ನೋವು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಅದ್ಭುತ ಹಣ್ಣಿನ ಅನೇಕ ಪ್ರಯೋಜನಗಳನ್ನ ವಿವರವಾಗಿ ತಿಳಿದುಕೊಳ್ಳಿ.
ಮಲಬದ್ಧತೆಗೆ ನಿವಾರಣೆ : ಸಪೋಟ (Chikoo) ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶಗಳನ್ನ ಹೊಂದಿದ್ದು, ಜೀರ್ಣಕ್ರಿಯೇ ಉತ್ತಮವಾಗಿ ನಡೆದು ಮಲವನ್ನ ಹೊರಹಾಕಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ವಿರುದ್ಧ ರಕ್ಷಣೆ : ಕೊಲೊನ್ ಕ್ಯಾನ್ಸರ್, ಡೈವರ್ಟಿಕ್ಯುಲೈಟಿಸ್ ಮತ್ತು ಉರಿಯೂತದ ಕರುಳಿನಂತಹ ಅನೇಕ ಆರೋಗ್ಯ ಪರಿಸ್ಥಿತಿಗಳಿಂದ ಸಪೋಟ ನಮ್ಮನ್ನು ರಕ್ಷಿಸುತ್ತದೆ.
ಕೀಲು ನೋವು ಕಡಿಮೆ : ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನ ಸುಧಾರಿಸುವುದರ ಜೊತೆಗೆ ಊತ ಮತ್ತು ಕೀಲು ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೇ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದರೇ ನೀವು ತಪ್ಪದೇ ಸಪೋಟ ಸೇವಿಸಿ.
ಶೀತ ಮತ್ತು ಕೆಮ್ಮ ಗುಣ – ಮೂಗಿನ ಮತ್ತು ಉಸಿರಾಟದ ಪ್ರದೇಶದಿಂದ ಕಫ ಮತ್ತು ಲೋಳೆಯನ್ನು ತೆಗೆದುಹಾಕುವ ಮೂಲಕ ಉಸಿರಾಟದ ಮತ್ತು ದೀರ್ಘಕಾಲದ ಕೆಮ್ಮುಗಳನ್ನ ನಿವಾರಿಸುವಲ್ಲಿ ಸಪೋಟ ಪರಿಣಾಮಕಾರಿಯಾಗಿದೆ.
ಮೂಳೆಗಳ ಆರೋಗ್ಯಕ್ಕೆ ಸಪೋಟ – ಮೂಳೆಗಳ ಗಟ್ಟಿತನ ಮತ್ತು ಬಲವರ್ಧನೆಗೊಳಿಸಿಲು ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದ ಸಮೃದ್ಧ ಪ್ರಮಾಣದ ಪೋಷಕಾಂಶಗಳು ಅತ್ಯಗತ್ಯ . ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಪೋಟಾ ಮೂಳೆಗಳನ್ನು ವರ್ಧಿಸಲು ಮತ್ತು ಬಲಪಡಿಸಲು ಹೆಚ್ಚು ಸಹಾಯ ಮಾಡುತ್ತದೆ.