ಹೆಚ್ಚಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ
ಆನ್ಲೈನ್ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಅಮೆಜಾನ್ ಪ್ರೈಮ್ ಸದಸ್ಯತ್ವವು ಡಿಸೆಂಬರ್ನಲ್ಲಿ ಶೇಕಡಾ 50 ರಷ್ಟು ಬೆಲೆ ಏರಿಕೆಯನ್ನು ಕಾಣಲಿದೆ ಎಂದು ವರದಿಯಾಗಿದೆ. Amazon ಅಪ್ಲಿಕೇಶನ್ನಿಂದ ಪ್ರಸ್ತುತ ವಾರ್ಷಿಕ ಸದಸ್ಯತ್ವದ 999 ರೂ ಯೋಜನೆಯು ಡಿಸೆಂಬರ್ ರವರೆಗೆ ಜಾರಿಯಲ್ಲಿರುತ್ತದೆ. ನಂತರ, Amazon Prime ಚಂದಾದಾರಿಕೆಯು ಸುಮಾರು 500 ರೂ ಅಥವಾ 50% ಹೆಚ್ಚಳವಾಗಲಿದೆ, ಮುಂದಿನ ವಾರ್ಷಿಕ ಸದಸ್ಯತ್ವಕ್ಕೆ ರೂ. 1,499, ಆಗಲಿದೆ.
ಇದು ಡಿಸೆಂಬರ್ 13 ರಿಂದ Amazon Prime ಚಂದಾದಾರಿಕೆ ರೀಚಾರ್ಜ್ ನಲ್ಲಿ ಬದಲಾವಣೆ ಕಾಣಲಿದೆ. ಹೊಸ ಬೆಲೆಗಳ ವಿವರಗಳನ್ನ Amazon ನಿಂದ ಮೊದಲೇ ದೃಢೀಕರಿಸಲಾಗಿದೆ.
ವಾರ್ಷಿಕ ಪ್ರೈಮ್ ಸದಸ್ಯತ್ವ ರೂ. 999, ಬದಲಿಗೆ 1,499 ರೂ, ಮೂರು ತಿಂಗಳ ಯೋಜನೆಯು ಪ್ರಸ್ತುತ ರೂ. 329 ಬದಲಿಗೆ 459 ರೂ. ಮತ್ತು ಒಂದು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಯೋಜನೆ ಪ್ರಸ್ತುತ 129.ರೂಪಾಯಿಂದ 179 ರಿಂದ ರೂ. ಗೆ ಹೆಚ್ಚಾಗಲಿದೆ.