ಅಮೆರಿಕಾದಲ್ಲಿ ಭಾರತೀಯರೇ ಟಾರ್ಗೆಟ್ – ನಾಲ್ವರು ಸಿಖ್ಖರು ಸೇರಿ 8 ಮಂದಿಯ ಕೊಲೆ
ಅಮೆರಿಕಾ : ಅಮೆರಿಕಾದಲ್ಲಿ ಇತ್ತೀಚೆಗೆ ಬಾರತೀಯರ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಬಾರತೀಯರನ್ನ ಟಾರ್ಗೆಟ್ ಮಾಡಲಾಗ್ತಿದೆ. ಈ ನಡುವೆ ಕಿಡಿಗೇಡಿಯೋರ್ವ ನಾಲ್ವರು ಸಿಖ್ಖರು ಸೇರಿದಂತೆ ಒಟ್ಟು 8 ಮಂದಿಗೆ ಗುಂಡು ಹಾರಿಸಿ ಹತ್ಯೆಗೈದು ತಾನೂ ಕೂಡ ಮೃತಪಟ್ಟಿದ್ದಾನೆ.
ಇಂಡಿಯಾನಾ ಮೂಲದ ಯುವಕನೊಬ್ಬ ಈ ರೀತಿ 8 ಜನರ ಸಾವಿಗೆ ಕಾರಣವಾಗಿ ತಾನೂ ಪ್ರಾಣ ಬಿಟ್ಟಿದ್ದಾನೆ. ಇಂಡಿಯಾನಾ ಮೂಲದ 19 ವರ್ಷದ ಯುವಕ ಬ್ರಾಂಡನ್ ಸ್ಕಾಟ್ ಹೋಲ್ ಎಂಬಾತ ಭಾರತೀಯರೆ ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫೆಡ್ಎುಕ್ಸ್ ಕೊರಿಯರ್ ಸರ್ವಿಸ್ ಸಂಸ್ಥೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲೂ ಅತಿ ಹೆಚ್ಚು ಸಿಖ್ ಸಮುದಾಯದವರೆ ಇರುವ ಸಂಸ್ಥೆ ಮೇಲೆ ದಾಳಿ ಮಾಡಿ ಹಲವರನ್ನು ಹತ್ಯೆ ಮಾಡಿರುವುದು ದುರಂತದ ಸಂಗತಿ ಎಂದು ಸಿಖ್ ಮುಖಂಡ ಗುರಿಂದರ್ಸಿಂಗ್ ಖಾಲ್ಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.